ರಾಷ್ಟ್ರೀಯ ಫ್ಲೋರ್‌ಬಾಲ್ ಚಾಂಪಿಯನ್‌ಷಿಪ್

ಫ್ಲೋರ್‌ಬಾಲ್ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾದ ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿಗಳಾದ ಹರ್ಷಿತ್, ಚಿರಾಗ್ ಚಂಗಪ್ಪ ಅವರ ಜತೆ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಹಾಗೂ ಪ್ರಾಂಶುಪಾಲ ಮಾದಯ್ಯ ಇದ್ದಾರೆ.
ಫ್ಲೋರ್‌ಬಾಲ್ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾದ ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿಗಳಾದ ಹರ್ಷಿತ್, ಚಿರಾಗ್ ಚಂಗಪ್ಪ ಅವರ ಜತೆ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಹಾಗೂ ಪ್ರಾಂಶುಪಾಲ ಮಾದಯ್ಯ ಇದ್ದಾರೆ.
Published on
ಪೊನ್ನಂಪೇಟೆ: ಜನವರಿ 5ರಿಂದ ನವದೆಹಲಿಯಲ್ಲಿ ನಡೆಯಲಿರುವ 19 ನೇ ರಾಷ್ಟ್ರೀಯ ಫ್ಲೋರ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಕೆ.ಎಸ್.ಹರ್ಷಿತ್ ಹಾಗೂ ಎಂ.ಡಿ.ಚಿರಾಗ್ ಚಂಗಪ್ಪ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಕರ್ನಾಟಕ ಫ್ಲೋರ್‌ಬಾಲ್ ತಂಡಕ್ಕೆ ಕೊಡಗಿನಿಂದ ಇಬ್ಬರು ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗಿದ್ದು, ಅವರಿಗೆ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಟಿ.ಸಂತೋಷ್ ತರಬೇತಿ ನೀಡಿದ್ದಾರೆ ಎಂದು ಪ್ರಾಂಶುಪಾಲ ಎಸ್.ಎಸ್.ಮಾದಯ್ಯ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net