ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ

ಸೋಮವಾರಪೇಟೆ ಜೈ ಜವಾನ್ ಮಾಜಿ ಸೈನಿಕರ ಸಂಘದ ವಾರ್ಷಿಕ ಸಭೆಯಲ್ಲಿ ಸಂಘದ ಸದಸ್ಯರಾದ ಎನ್.ಬಿ. ಚಂದ್ರಾವತಿ, ಬಿ.ಎಸ್. ಶೇಷಪ್ಪ, ಜಿ.ಎಂ. ಮಂಜುನಾಥ ಹಾಗೂ ಎಚ್.ಆರ್. ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು. ಈರಪ್ಪ, ಸುಬ್ರಮಣ್ಯ, ಬಸಪ್ಪ ಇದ್ದರು.
ಸೋಮವಾರಪೇಟೆ ಜೈ ಜವಾನ್ ಮಾಜಿ ಸೈನಿಕರ ಸಂಘದ ವಾರ್ಷಿಕ ಸಭೆಯಲ್ಲಿ ಸಂಘದ ಸದಸ್ಯರಾದ ಎನ್.ಬಿ. ಚಂದ್ರಾವತಿ, ಬಿ.ಎಸ್. ಶೇಷಪ್ಪ, ಜಿ.ಎಂ. ಮಂಜುನಾಥ ಹಾಗೂ ಎಚ್.ಆರ್. ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು. ಈರಪ್ಪ, ಸುಬ್ರಮಣ್ಯ, ಬಸಪ್ಪ ಇದ್ದರು.
Published on
ಸೋಮವಾರಪೇಟೆ: ಜೈ ಜವಾನ್ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ, ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ಅವರ ಅಧ್ಯಕ್ಷತೆಯಲ್ಲಿ ಪತ್ರಿಕಾಭವನದಲ್ಲಿ ಶನಿವಾರ ನಡೆಯಿತು.
ಸಭೆಯಲ್ಲಿ ಅಧ್ಯಕ್ಷ ಈರಪ್ಪ ಮಾತನಾಡಿ, ಸಂಘದ ಸ್ವಂತ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಎಲ್ಲ ಸದಸ್ಯರು ಸಮಯಕ್ಕೆ ಸರಿಯಾಗಿ ಸದಸ್ಯತ್ವ ನವೀಕರಿಸುವ ಮೂಲಕ ಎಲ್ಲ ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಸಂಘದ ಉಪಾಧ್ಯಕ್ಷ ಎಸ್.ಎಂ. ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಆರ್.ಜಿ. ಬಸಪ್ಪ. ಖಜಾಂಚಿ ಎನ್.ಜಿ. ಕೆಂಪಯ್ಯ ಸೇರಿದಂತೆ ನಿರ್ದೇಶಕರು ಇದ್ದರು. ಇದೇ ಸಂದರ್ಭ ಸಂಘದ ಸದಸ್ಯರಾದ ಎನ್.ಬಿ. ಚಂದ್ರಾವತಿ, ಬಿ.ಎಸ್. ಶೇಷಪ್ಪ, ಜಿ.ಎಂ. ಮಂಜುನಾಥ ಹಾಗೂ ಎಚ್.ಆರ್.ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net