

ಕುಶಾಲನಗರ:
ಮನುಷ್ಯನ ಬದುಕಿನ ಸಾಂಸ್ಕ್ರತಿಕ, ಸಾಮಾಜಿಕ ಹಾಗೂ ರಾಜಕೀಯ ಇತಿಹಾಸದ ಎಷ್ಟೋ ಸಂಗತಿಗಳನ್ನು ಒಳಗೊಂಡ ಸಮಷ್ಟಿ ಪ್ರಜ್ಞೆಯ ಸೃಷ್ಟಿಯೇ ಜಾನಪದ. ಅದರಲ್ಲಿನ ವಿವೇಕಯುತ ಚಿಂತನೆಗಳು ನಮ್ಮ ನಾಡಿನ ಪರಂಪರೆಯನ್ನು ಶ್ರೀಮಂತಗೊಳಿಸಿವೆ ಎಂದು ಕೊಡಗು ವಿವಿ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಪಟ್ಟರು. ಕೊಡಗು ವಿಶ್ವವಿದ್ಯಾಲಯ, ಕನ್ನಡ ಜಾನಪದ ಪರಿಷತ್ತು, ಬೆಂಗಳೂರು ಹಾಗೂ ಕನ್ನಡ ಜಾನಪದ ಪರಿಷತ್ತು, ಕೊಡಗು ಜಿಲ್ಲಾ ಘಟಕ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಗೀತೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪೂರ್ವಜರು ಜತನದಿಂದ ಸಂರಕ್ಷಿಸಿಕೊAಡು ಬಂದಿರುವ ಜಾನಪದವನ್ನು ಮುಂದಿನ ಪೀಳಿಗೆಗೆ ಜೋಪಾನವಾಗಿ ಒಯ್ಯಬೇಕಿದೆ.
ಜಾನಪದ ಎಂಬುದು ವಾಸ್ತವಿಕ ಆಧಾರಗಳ ಮೇಲೆ ನಿಲ್ಲಬಲ್ಲ ವಿಜ್ಞಾನವಾಗಿದ್ದು, ಕಲೆಯ ಜತೆಗೆ ಶಾಸ್ತ್ರೀಯ ಮುಖವನ್ನು ಸಹ ಒಳಗೊಂಡಿದೆ. ಕಲೆಯ ಜತೆಗೆ ಶಾಸ್ತ್ರೀಯವಾಗಿರುವ ಜಾನಪದವನ್ನು ನಾವೆಲ್ಲರೂ ಅರಿಯಬೇಕಿದೆ. ಮನುಷ್ಯನ ಬದುಕನ್ನು ಸಾಮಾಜಿಕ ಹಾಗೂ ಸಾಂಸ್ಕ್ರತಿಕವಾಗಿ ಶ್ರೀಮಂತಗೊಳಿಸುವ ಜನಪದ ಮನುಷ್ಯನ ಆತ್ಮದೊಳಗೆ ಇರುವ ಬಹು ದೊಡ್ಡ ಕಲಾ ಪ್ರಾಕಾರವಾಗಿದೆ. ಜಾನಪದದಲ್ಲಿ ಕಂಸಾಳೆ, ವೀರಗಾಸೆ, ಡೊಳ್ಳುಕುಣಿತ, ಯಕ್ಷಗಾನ, ದುಡಿ, ಕೋಲಾಟ ಮೊದಲಾದ ಜಾನಪದ ಕಲೆಗಳು ವೈವಿಧ್ಯಮಯವಾಗಿ ಹಾಸು ಹೊಕ್ಕಾಗಿವೆ. ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನ್ನುವ ಕಲೆ ಜಾನಪದ ಕಲೆ. ಬೀಸುವ ಕಲ್ಲು, ಕುಟ್ಟುವ ಒನಕೆ, ಕೇರುವ ಮರ ಮೊದಲಾದ ಜಾನಪದ ಸಂಸ್ಕ್ರತಿಗಳನ್ನು ನಶಿಸಲು ಬಿಡದೇ ಪೀಳಿಗೆಯಿಂದ ಪೀಳಿಗೆಗೆ ಸಂರಕ್ಷಿಸಿಕೊAಡು ಹೋಗಬೇಕಾದ ಮಹತ್ವದ ಜವಾಬ್ದಾರಿ ನಮ್ಮೆಲ್ಲರದ್ದಾಗಬೇಕೆಂದು ಎಂದು ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಸಂಸ್ಕ್ರತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಪದ್ಮಶೇಖರ್ ಮಾತನಾಡಿ, ನಾನು ಹುಟ್ಟಿ ಬೆಳೆದ ನೆಲದಲ್ಲಿ ಕೊಡಗು ವಿಶ್ವವಿದ್ಯಾಲಯ ಸ್ಥಾಪನೆಯಾಗಿರುವುದು ಬಹು ದೊಡ್ಡ ಸಂತಸದ ಸಂಗತಿ. ಈ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಸಂಬAಧಿಸಿದAತೆ ಕರ್ನಾಟಕ ರಾಜ್ಯ ಸರ್ಕಾರದಿಂದ ಅನುದಾನವನ್ನು ಕೋರುವ ನಿಟ್ಟಿನಲ್ಲಿ ಕೊಡಗಿನ ಮಗಳಾಗಿ ನಾನು ಕೂಡ ನಿಮ್ಮ ಜೊತೆ ಕೈಜೋಡಿಸುತ್ತೇನೆ.
ಗುಣಮಟ್ಟದ ಶಿಕ್ಷಣಕ್ಕೆ ಕೊಡಗು ವಿಶ್ವವಿದ್ಯಾಲಯ ಆದ್ಯತೆ ನೀಡಲಿ. ಪ್ರತಿಭೆ ಮತ್ತು ಜ್ಞಾನದ ಮೂಲಕ ಸಾಧನೆಯ ಶಿಖರವೇರಲಿಕ್ಕೆ ಸಾಧ್ಯ ಇದೆ ಎಂದರು.
ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಕೊಡಗು ವಿವಿ ಕುಲಸಚಿವ (ಮೌಲ್ಯಮಾಪನ) ಡಾ. ಎಂ. ಸುರೇಶ್ ಅಲೆಟ್ಟಿ, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬAಧವನ್ನು ಹೊಂದುವ ಮೂಲಕ ತಲೆ ತಲಮಾರುಗಳಿಂದ ಬಂದಿರುವ ಹಾಗೂ ಪರಂಪರೆಯಲ್ಲಿ ಬೆಸೆದು ಹೋಗಿರುವ ಜಾನಪದವು ಅನಕ್ಷರಸ್ಥರಿಂದಲೇ ಬೆಳೆದು ಬಂದಿದೆ ಎಂದರು.
ಕೊಡಗು ವಿವಿ ನಿಕಟ ಪೂರ್ವ ಕುಲಸಚಿವ ಡಾ. ಸೀನಪ್ಪ ಮಾತನಾಡಿ, ಕನ್ನಡ ನಾಡು-ನುಡಿ, ಸಂಸ್ಕೃತಿಯ ಸಂರಕ್ಷಣಾ ಹೊಣೆ, ಜಾನಪದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಬದುಕನ್ನು ರೂಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಯಾವುದೇ ಅಧಿಕಾರದ, ಸಂಪ್ರದಾಯದ ಪೋಷಣೆಯಿಲ್ಲದೇ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕ್ರತಿಯ ಸಾರವಾಗಿರುವ ಜನಪದವನ್ನು ಮಕ್ಕಳಾದಿಯಾಗಿ ಎಲ್ಲರೂ ಉಳಿಸಿ ಬೆಳೆಸಬೇಕೆಂದರು.
ಮೈಸೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೊಡಗು ಜಿಲ್ಲಾ ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷೆ ಡಾ.ಕಾವೇರಿ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಪ್ರಮುಖರಾದ ಡಾ.ರಾಣಿಪ್ರಭಾ, ಡಾ. ವಿನೋದ, ಡಾ. ರವಿಶಂಕರ ಜಿ., ರಾಜೇಶ್ವರಿ ಟಿ.ಎನ್., ಡಾ.ಜಮೀರ್ ಅಹಮದ್, ಡಾ.ಐ.ಕೆ.ಮಂಜುಳಾ, ಡಾ. ರಮೇಶ್, ವಿವಿಧ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ವೃಂದ, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.
ಕಾರ್ಯಕ್ರಮದಲ್ಲಿ ಡಾ. ಪದ್ಮಶೇಖರ್, ಜಾನಪದ ಕಲಾ ಸಾಧಕರಾದ ಕುಡಿಯರ ದೇವಕಿ, ಸುಳ್ಳಿಮಾಡ ಗೌರಿ ನಂಜಪ್ಪ ಹಾಗೂ
ಕೊಡಗು ವಿವಿ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಜೀವ್ ಹಾಗೂ ವಿದ್ಯಾಶ್ರೀ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭ ಹೆಸರಾಂತ ಜಾನಪದ ಗಾಯಕರಾದ ಅಮ್ಮ ರಾಮಚಂದ್ರ, ಯರಗನಹಳ್ಳಿ ಶ್ರೀಧರ್ ಅವರಿಂದ ಗೀತೋತ್ಸವ ನಡೆಯಿತು.