ಸಿಎಸ್‌ಐಆರ್-ಎನ್‌ಐಐಎಸ್ಟಿ ಮತ್ತು ಕೊಡಗು ವಿವಿ ನಡುವೆ ತಿಳುವಳಿಕೆ ಒಪ್ಪಂದ

kodagu vv
Published on

ಕುಶಾಲನಗರ:

ಮುಂದಿನ ಪೀಳಿಗೆಯ ಆಹಾರ ಸಂಸ್ಕರಣೆಯು ಸ್ಮಾರ್ಟ್, ಸ್ವಚ್ಛ ಮತ್ತು ಸುಸ್ಥಿರ ಆಹಾರ ವ್ಯವಸ್ಥೆಯತ್ತ ಒಂದು ಹೆಜ್ಜೆಯಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಹೇಳಿದರು. ತಿರುವನಂತಪುರAನ ಸಿಎಸ್‌ಐಆರ್-ರಾಷ್ಟ್ರೀಯ ಅಂತರಶಿಸ್ತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಎಸ್‌ಐಆರ್-ಎನ್‌ಐಐಎಸ್‌ಟಿ)ಯಲ್ಲಿ ಎನ್‌ಐಐಎಸ್ಟಿಯ ಸುವರ್ಣ ಮಹೋತ್ಸವ ಆಚರಣೆಗಾಗಿ ಈಚೆಗೆ ಆಯೋಜಿಸಿದ್ದ 'ಮುಂದಿನ ಪೀಳಿಗೆಯ ಆಹಾರ ತಂತ್ರಜ್ಞಾನಗಳು: ಸುಸ್ಥಿರ ನಾಳೆಗಾಗಿ ಸಂಸ್ಕರಣೆ' ಕುರಿತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಮುಂದಿನ ಪೀಳಿಗೆಯ ಆಹಾರ ಸಂಸ್ಕರಣೆ ಕೇವಲ ತಾಂತ್ರಿಕ ಅಧಾರಿತವಲ್ಲ, ಬದಲಾಗಿ ಚುರುಕಾದ, ಸ್ವಚ್ಛ ಮತ್ತು ಹೆಚ್ಚು ಸುಸ್ಥಿರ ಆಹಾರ ವ್ಯವಸ್ಥೆಯತ್ತ ಒಂದು ಹೆಜ್ಜೆ ಮುಂದೆ ಇರಿಸಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿಎಸ್‌ಐಆರ್-ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್, ಪೌಷ್ಟಿಕಾಂಶ ಮತ್ತು ಸ್ವಾಸ್ಥ್ಯವನ್ನು ಖಚಿತಪಡಿಸಿಕೊಳ್ಳಲು ಆಹಾರ ಕ್ಷೇತ್ರದಲ್ಲಿ ಅನುವಾದ ಸಂಶೋಧನೆಯ ಮಹತ್ವವನ್ನು ಒತ್ತಿ ಹೇಳಿದರು.

ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ವಿಜ್ಞಾನ ಮತ್ತು ಮಾನದಂಡಗಳು ಮತ್ತು ನಿಯಮಗಳ ಸಲಹೆಗಾರ್ತಿ ಅಲ್ಕಾ ರಾವ್ ಮಾತನಾಡಿ, ದೇಶದಲ್ಲಿ ಸುರಕ್ಷಿತ ಮತ್ತು ನವೀನ ಆಹಾರ ವ್ಯವಸ್ಥೆಗಳನ್ನು ಬೆಂಬಲಿಸುವ ವಿಕಸನಗೊಳ್ಳುತ್ತಿರುವ ನಿಯಂತ್ರಕ ಚೌಕಟ್ಟಿನ ಬಗ್ಗೆ ಮಾತನಾಡಿದರು.

ಎನ್‌ಐಐಎಸ್‌ಟಿ ನಿರ್ದೇಶಕ ಸಿ. ಆನಂದರಾಮಕೃಷ್ಣನ್ ಮಾತನಾಡಿ, ವಿಜ್ಞಾನವನ್ನು ಸಮಾಜಕ್ಕೆ ಅಳೆಯಬಹುದಾದ ಪರಿಹಾರಗಳಾಗಿ ಭಾಷಾಂತರಿಸುವುದು ಸಂಸ್ಥೆಯ ಸುವರ್ಣ ಮಹೋತ್ಸವದ ದೃಷ್ಟಿಕೋನವಾಗಿದೆ ಎಂದು ಹೇಳಿದರು.

ಈ ಸಮಾವೇಶದಲ್ಲಿ 'ಆಯುರ್-ಆಹಾರ್‌ನಲ್ಲಿ ಪ್ರಗತಿಗಳು', 'ಭಾರತದಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸುವಲ್ಲಿ ಇತ್ತೀಚಿನ ಸವಾಲುಗಳು' ಮತ್ತು 'ಆಹಾರ ಸಂಸ್ಕರಣೆಯಲ್ಲಿ ಇತ್ತೀಚಿನ ಪ್ರಗತಿಗಳು' ಎಂಬ ವಿಷಯಗಳ ಕುರಿತು ಚರ್ಚೆಗಳು ನಡೆದವು.

ಈ ಸಂದರ್ಭದಲ್ಲಿ, ಆಹಾರ ಸಂಸ್ಕರಣೆ ಮತ್ತು ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆ, ಶೈಕ್ಷಣಿಕ ವಿನಿಮಯ ಮತ್ತು ಸಾಮರ್ಥ್ಯ ವೃದ್ಧಿಯನ್ನು ಉತ್ತೇಜಿಸಲು ಸಿಎಸ್‌ಐಆರ್-ಎನ್‌ಐಐಎಸ್ಟಿ ಮತ್ತು ಕೊಡಗು ವಿಶ್ವವಿದ್ಯಾಲಯದ ನಡುವೆ ತಿಳುವಳಿಕೆ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕಲಾಯಿತು. ಎರಡೂ ಸಂಸ್ಥೆಗಳ ಪೂರಕ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ ಈ ಒಪ್ಪಂದ ಮಾಡಿಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net