

ಕುಶಾಲನಗರ:
ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಕೊಡಗು ವಿಶ್ವ ವಿದ್ಯಾಲಯ ಹಿತರಕ್ಷಣಾ ಬಳಗ ವತಿಯಿಂದ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕೊಡಗು ವಿವಿ ಉಳಿಸಿಕೊಳ್ಳಲು ನನ್ನ ಸಹಮತವಿದೆ. ಜಿಲ್ಲೆಯ ಸಾಕ್ಷರತೆ ಪ್ರಮಾಣ ಕೂಡ ಉತ್ತಮವಾಗಿದ್ದು, ಉನ್ನತ ಶಿಕ್ಷಣಕ್ಕಾಗಿ ವಿವಿ ಉಳಿಸಿ ಬೆಳೆಸುವ ಅಗತ್ಯವಿದೆ. ಮಂಗಳೂರು, ಮೈಸೂರು, ಬೆಂಗಳೂರು ವಿವಿ ಮಾದರಿಯಲ್ಲಿ ಕೊಡಗು ವಿವಿ ಕೂಡ ಅಭಿವೃದ್ಧಿ ಹೊಂದುವAತಾಗಬೇಕು. ಕೊಡಗು ವಿವಿ ಅಗತ್ಯತೆ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸೇರಿದಂತೆ ಉನ್ನತ ಶಿಕ್ಷಣ ಸಚಿವರೊಂದಿಗೆ ಜಿಲ್ಲೆಯ ಇಬ್ಬರು ಶಾಸಕರು, ಉಸ್ತುವಾರಿ ಸಚಿವ ಭೇಟಿ ಮಾಡಿ ಚರ್ಚಿಸಿದ್ದೇವೆ. ಮತ್ತೊಂದೆಡೆ ಕೊಡಗು ವಿವಿ ವಿಲೀನಗೊಳಿಸುವ ಪ್ರಯತ್ನಕ್ಕೆ ಕೂಡ ಕೆಲವರು ತೆರೆಮರೆಯಲ್ಲಿ ಮುಂದಾಗಿದ್ದಾರೆ. ಕೇವಲ ಆರ್ಥಿಕ ಸ್ಥಿತಿಗತಿ ಮೇಲೆ ವಿವಿಯ ಅಸ್ತಿತ್ವ ಪ್ರಶ್ನೆಯಾಗಬಾರದು. ಖಾಸಗಿ ಸಂಸ್ಥೆಗಳ ಸಿ.ಎಸ್.ಆರ್. ಅನುದಾನ ಒಳಗೊಂಡAತೆ ಶಾಸಕರ ನಿಧಿಯ ಪಾಲನ್ನು ವಿನಿಯೋಗಿಸಿ ಕೊಡಗು ವಿವಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಮಾರ್ಚ್ ತಿಂಗಳಲ್ಲಿ ದಿನ ನಿಗದಿಗೊಳಿಸಿ ಜಿಲ್ಲೆಯಿಂದ ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿ ಹಾಗೂ ಉಪಸಮಿತಿ ಭೇಟಿ ಮಾಡಿ ವಿವಿಯ ಸ್ಥಿತಿಗತಿ, ವಾಸ್ತವಾಂಶದ ಬಗ್ಗೆ ಗಮನ ಸೆಳೆಯಲು ಸಿದ್ದರಾಗಬೇಕು ಎಂದರು.
ಕೊಡಗು ವಿವಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಕೊಡಗು ವಿವಿ ಯಿಂದ ಉಂಟಾಗಿರುವ ಅನುಕೂಲ, ವಿವಿ ವಜಾಗೊಳಿಸುವುದು ಅಥವಾ ವಿಲೀನಗೊಳಿಸುವುದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉಂಟಾಗುವ ಅನಾನುಕೂಲತೆ ಬಗ್ಗೆ ಶಾಸಕರ ಗಮನ ಸೆಳೆದರು. ಇದೇ ಸಂದರ್ಭ ಕೊಡಗು ವಿವಿ ಮುಂದುವರೆಸುವAತೆ ಆಗ್ರಹಿಸಿ ಹಿತರಕ್ಷಣಾ ಬಳಗದ ವತಿಯಿಂದ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪುರಸಭೆ ಅಧ್ಯಕ್ಷೆ ಜಯಲಕ್ಷಿö್ಮÃ ಚಂದ್ರು, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಸುರೇಶ್, ಸದಸ್ಯರಾದ ದಿನೇಶ್, ಜಯಲಕ್ಷ್ಮಿ ನಂಜುAಡಸ್ವಾಮಿ, ಎಂ.ಎA. ಪ್ರಕಾಶ್, ಶಿವಶಂಕರ್, ಜಿ.ಬಿ. ಜಗದೀಶ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕುಡಾ ಸದಸ್ಯ ಕಿರಣ್, ಶಾಜಿ ಸೇರಿದಂತೆ ವಿವಿಧ ಸಂಘಸAಸ್ಥೆಗಳ ಪ್ರಮುಖರಾದ ಟಿ.ಆರ್. ಶರವಣಕುಮಾರ್, ದೀಪಕ್, ದೀಪಾ ಪೂಜಾರಿ, ಲೋಕೇಶ್ ಸಾಗರ್, ಹೆಚ್.ವಿ. ಶಿವಪ್ಪ, ಶಾಂಭಶಿವಮೂರ್ತಿ, ಉದಯಕುಮಾರ್ ಮತ್ತಿತರರು ಇದ್ದರು.