ಕೊಡಗಿನಲ್ಲಿ ವಿಫಲಗೊಂಡ ಪರಿವರ್ತಕಗಳನ್ನು ೨೪ ಗಂಟೆ ಒಳಗೆ ಅಳವಡಿಕೆ

distribution-transformer
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಜಿಲ್ಲೆಯಲ್ಲಿ ವಿಫಲಗೊಂಡ ಪರಿವರ್ತಕಗಳನ್ನು ೨೪ ಗಂಟೆಯೊಳಗೆ ಬದಲಾಯಿಸಲಾಗುತ್ತಿದೆ. ಪರಿವರ್ತಕ ಬದಲಾಯಿಸಲು ಉಪವಿಭಾಗವಾರು ಪರಿವರ್ತಕಗಳ ಬ್ಯಾಂಕ್ ಸ್ಥಾಪಿಸಲಾಗಿದೆ. ಮಡಿಕೇರಿ ವಿಭಾಗ ವ್ಯಾಪ್ತಿಯಲ್ಲಿ ಪರಿವರ್ತಕಗಳನ್ನು ತುರ್ತಾಗಿ ಬದಲಾಯಿಸಲು ಉಗ್ರಾಣದಲ್ಲಿ ಪರಿವರ್ತಕ ಕಾಯ್ದಿರಿಸಲಾಗಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿವರ್ತಕ ಬದಲಾವಣೆಗೆ ಪ್ರತಿ ಉಪಭಾಗಗಳಿಗೆ ವಾಹನದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪರಿವರ್ತಕ ಬದಲಾವಣೆ ಕಾರ್ಯಕ್ಕೆ ನಿಗಮದ ಅಧಿಕಾರಿಗಳು, ನೌಕರರು ವಿಫಲಗೊಂಡ ಪರಿವರ್ತಕ ಬದಲಾಯಿಸಲು ವಿಳಂಬ ಮಾಡಿದರೆ ಅಥವಾ ಯಾರಾದರೂ ನೌಕರರು, ಅಧಿಕಾರಿ ಗಳು, ಮಧ್ಯವರ್ತಿಗಳು ಹಣಕ್ಕಾಗಿ ಪೀಡಿಸಿದರೆ ದೂರು ನೀಡುವಂತೆ ಮನವಿ ಮಾಡಿದ್ದಾರೆ.

ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಸೋಮವಾರಪೇಟೆ, ಕುಶಾಲನಗರ ತಾಲೂಕಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ದ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ದೂರವಾಣಿ ಸಂಖ್ಯೆ ೯೪೪೯೫೯೮೬೦೧ ಅನ್ನು ಸಂಪರ್ಕಿಸಬಹುದು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂರವಾಣಿ ಸಂಖ್ಯೆ ೧೯೧೨ ಅನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net