ಕೊಡಗಿನಲ್ಲಿ ಹುಲಿ ದಾಳಿಗೆ ಮತ್ತೊಂದು ಹಸು ಬಲಿ

IMG-20210316-WA0036
Published on

ಮಡಿಕೇರಿ: ನರಹಂತಕ ಹುಲ್ಲಿ ಕೊಲ್ಲಲು ಒತ್ತಡ ಹೆಚ್ಚಾಗುತ್ತಿದ್ದಂತೆ ಹುಲಿ ದಾಳಿಗೆ ಕೊಡಗಿನಲ್ಲಿ ಮತ್ತೊಂದು ಹಸು ಜೀವ ಕಳೆದುಕೊಂಡಿದೆ. ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ನಿಟ್ಟೂರು ಗ್ರಾಮ ಪಂಚಾಯಿತಿಯ ಕೊಟ್ಟಗೇರಿಯಲ್ಲಿ ಮಂಗಳವಾರ ಮುಂಜಾನೆ ಹುಲಿ ದಾಳಿಗೆ ಹಸು ಬಲಿಯಾಗಿದೆ.

ಅಳಮೇಂಗಡ ಮೋಹನ್ ಮೊಣ್ಣಪ್ಪ ಅವರ ಮನೆ ಸಮೀಪದಲ್ಲಿಯೇ ಇರುವ ಕೊಟ್ಟಿನಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಹುಲಿ ಮುಂಜಾನೆ ದಾಳಿಗೆ ಮಾಡಿತ್ತು. ಹಸು ಆಕ್ರಂದನಕ್ಕೆ ಮನೆಯವರು ಬೊಬ್ಬೆ ಹಾಕಿದ್ದು, ಈ ವೇಳೆ ಕೊಟ್ಟಿಗೆಯಿಂದ ಹುಲಿ ಓಡಿ ಹೋಗಿದೆ. ಹಸುವನ್ನು ಕೊಂದು ಹಾಕಿದ್ದು, ಜನರು ಬೊಬ್ಬೆ ಹಾಕಿದ್ದರಿಂದ ಕೊಂದ ಹಸುವನ್ನು ತಿಂದಿಲ್ಲ.

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಟ್ಟಗೇರಿ ಗ್ರಾಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸಮೀಪದಲ್ಲಿರುವ ಗ್ರಾಮವಾಗಿದೆ. ಹುಲಿ ದಾಳಿ ಮುಂದುವರಿದಿರುವುದು ಭಯಭೀತರಾಗಿರುವ ದಕ್ಷಿಣ ಕೊಡಗಿನ ಜನತೆ ಮತ್ತಷ್ಟು ಆತಂಕಕ್ಕೀಡಾಗುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net