ಅರಣ್ಯ ಕಾರ್ಯಾಚರಣೆ ತಂಡಕ್ಕೆ ಪತ್ತೆಯಾಗದ ನರಹಂತಕ ಹುಲಿ

16 SRI 03
Published on

ಮಡಿಕೇರಿ: ನರಹಂತಕ ಹುಲಿ ಪತ್ತೆಗೆ ಕಾರ್ಯಾಚರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ತಂಡಕ್ಕೆ ಇನ್ನೂ ಹುಲಿ ಪತ್ತೆಯಾಗಿಲ್ಲ. ರೈತರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಕಾಣಸಿಗುವ ಹುಲಿ, ಕಾರ್ಯಾಚರಣೆ ತಂಡಕ್ಕೆ ಏಕೆ ಕಾಣುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ.

150 ಕ್ಕೂ ಹೆಚ್ಚು ಜನ ಕಾರ್ಯಾಚರಣೆ ತಂಡದಲ್ಲಿದ್ದಾರೆ. ಮಂಗಳವಾರಕ್ಕೆ ಕಾರ್ಯಾಚರಣೆ ಪ್ರಾರಂಭವಾಗಿ 24 ದಿನ ಕಳೆದಿದೆ. ಹುಲಿ ದಾಳಿಯಿಂದ ಮಾವನ ಮತ್ತು ಜಾನುವಾರು ಬಲಿಯಾದ ಸ್ಥಳದಲ್ಲಿ ಹುಲಿಯನ್ನು ಆಕರ್ಷಿಲು ಎಮ್ಮೆ, ಹಸು ಕಟ್ಟಿಹಾಕಲಾಗಿದೆ. ಹುಲಿ ಪತ್ತೆಗೆ ಜಾನುವಾರುಗಳನ್ನು ಅವಮಾನವೀಯವಾಗಿ ಕಟ್ಟಿ ಹಾಕಿ, ಶೋಷಣೆ ಮಾಡಲಾಗುತ್ತಿದೆ ಎಂದು ಶ್ರೀಮಂಗಲ ಭಾಗದ ರೈತ ಮುಖಂಡ ಬಾಚಂಗಡ ಭವಿಕುಮಾರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಮಂಚಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸೆರೆ ಹಿಡಿದಿರುವ ಹೆಣ್ಣು ಹುಲಿ ಮಾನವರ ಮೇಲೆ ದಾಳಿ ಮಾಡಿಲ್ಲ ಎಂಬುದು ಹೈದಾರಬಾದ್ ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ. 2013 ರಲ್ಲಿ ಹುಲಿ ಸಮೀಕ್ಷೆಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಪತ್ತೆಯಾದ ಗಂಡು ಹುಲಿಯನ್ನು ನರಹಂತಕ ಹುಲಿ ಎಂದು ಅರಣ್ಯ ಇಲಾಖೆ ಗುರುತು ಹಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net