ಕೊಡಗಿನಲ್ಲಿ ಮುಂದುವರಿದ ಹುಲಿ ದಾಳಿ

5mdkm3
Published on

ಮಡಿಕೇರಿ: ಕಳೆದೆರಡು ವಾರದಿಂದ ಕೊಡಗನ್ನು ಕಾಡುತ್ತಿರುವ ಹುಲಿ ದಾಳಿ ಮತ್ತೆ ಮುಂದುವರಿದಿದೆ. ನರಹಂತಕ ಹುಲಿ ಸೆರೆ ಕಾರ್ಯಾಚರಣೆ ನಡುವೆಯೂ ಹುಲಿ ಜಾನುವಾರು ಬಲಿ ತೆಗೆದುಕೊಳ್ಳುವುದು ಮುಂದುವರಿದಿದೆ. ಹಲವು ಗ್ರಾಮಗಳಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಪಂ ವ್ಯಾಪ್ತಿಯ ತಾವಳಗೆರಿ ಗ್ರಾಮದಲ್ಲಿ ಗುರುವಾರ ರಾತ್ರಿ ಹುಲಿ ದಾಳಿಗೆ ಎರಡು ಹಸು ಜೀವ ಕಳೆದುಕೊಂಡಿದೆ. ಮನೆ ಸಮೀಪದಲ್ಲಿ ಕಟ್ಟಿಹಾಕಿದ್ದ ಹಸು ಬಲಿಯಾಗಿದೆ. ಹಾಲು ಕರೆಯುತ್ತಿದ್ದ ಹಸು, ಹುಲಿ ದಾಳಿಗೆ ತುತ್ತಾಗಿರುವುದಕ್ಕೆ ಮಾಲೀಕರು ಕಣ್ಣೀರು ಸುರಿಸುತ್ತಿದ್ದರು. ಇದನ್ನೂ ಓದಿರಿ ಸೆಕ್ಸ್​ ವಿಡಿಯೋದಲ್ಲಿ ರಮೇಶ್​ ಜಾರಕಿಹೊಳಿಯ ಮಚ್ಚೆ ಹುಡುಕಿದ ಮಹೇಶ್​ ಕುಮಟಳ್ಳಿ!

ವಿರಾಜಪೇಟೆ ತಾಲೂಕು ವ್ಯಾಪ್ತಿಯ ಮಗ್ಗುಲ ಗ್ರಾಮದ ಪುಲಿಯಂಡ ಜಗದೀಶ್ ಕಾಫಿ ತೋಟದಲ್ಲಿ ಶುಕ್ರವಾರ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತೋಟದಲ್ಲಿ ಹುಲಿ ಇರುವ ಸಾಧ್ಯತೆ ಇದ್ದು, ತಕ್ಷಣ ಸೆರೆಹಿಡಿಯಬೇಕೆಂದು ಭಯಭೀತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಕುರ್ಚಿ ಗ್ರಾಮದ ಅಜ್ಜಮಾಡ ಗಣೇಶ್ ಅವರಿಗೆ ಸೇರುದ ಜಾನುವಾರ ಹುಲಿ ದಾಳಿಗೆ ಬಲಿಯಾಗಿದೆ. ಕೆಲವು ದಿನಗಳಿಂದ ಕಾಣೆಯಾಗಿದ್ದ ಹುಲಿ, ಕಳೇಬರ ಕಾಫಿ ತೋಟದಲ್ಲಿ ಶುಕ್ರವಾರ ಪತ್ತೆಯಾಗಿದೆ. ಹುಲಿ ದಾಳಿಯಿಂದಾಗಿ ಕುರ್ಚಿ ಗ್ರಾಮದ ಸಾರ್ವಜನಿಕರು ಭಯಭೀತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net