ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ೨ ಲಕ್ಷ ರೂ. ಮೌಲ್ಯದ ಮರ ವಶ

22mdks4 - Copy
Published on

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
ಕಾಫಿ ತೋಟದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ೨ ಲಕ್ಷ ರೂಪಾಯಿ ಮೌಲ್ಯದ ಹಲಸು ಮರದ ನಾಟವನ್ನು ಅರಣ್ಯ ಇಲಾಖೆಯವರು ವಶ ಪಡಿಸಿಕೊಂಡಿದ್ದಾರೆ.

ಕುಂಬೇರಿ ಗ್ರಾಮದ ಮಾಚಿಮಂಡ ಮುತ್ತಪ್ಪ ಕಾಫಿ ತೋಟದಲ್ಲಿ ಅಕ್ರಮವಾಗಿ ೨ ಹಲಸು ಮರ ಕಡಿದು, ನಾಟಗಳಾಗಿ ಪರಿವರ್ತಿಸಿ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಿರುವುದನ್ನು ವಿರಾಜಪೇಟೆ ಅರಣ್ಯ ವಲಯದವರು ಗುರುವಾರ ಪತ್ತೆ ಹಚ್ಚಿದ್ದಾರೆ. ಆನಂದಪುರ ಗ್ರಾಮದ ಚರಣ್ ರಾಜ್, ನೆಲ್ಲಿಹುದಿಕೇರಿ ಗ್ರಾಮದ ರಶೀದ್, ನೆಲ್ಲಿಹುದಿಕೇರಿಯ ಈ.ಕೆ. ಅಸೈನಾರ್ ಅವರನ್ನು ಬಂಧಿಸ ಲಾಗಿದೆ.

ವಿರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳಿರ ಎಂ. ದೇವಯ್ಯ, ಉಪ ವಲಯ ಅರಣ್ಯಾಧಿಕಾರಿತಗಳಾದ ದೇಯಂಡ ಸಂಜಿತ್ ಸೋಮಯ್ಯ, ಎಂ.ಎಸ್. ಮೋನಿಷಾ, ಶ್ರೀಶೈಲ ಮಲ್ಲಪ್ಪ ಮಾಲಿಗೌಡ್ರ, ಕೆ.ಆರ್. ಆನಂದ, ಸಚಿನ್ ನಿಂಬಾಳ್ಕರ್, ಎನ್.ಎನ್. ಅಕ್ಕಮ್ಮ, ಸಿ.ಟಿ. ಅನಿಲ್, ಅರಣ್ಯ ರಕ್ಷಕರಾದ ಸಿ. ಅರುಣ, ಚಂದ್ರಶೇಖರ ಅಮರಗೋಳ, ನಾಗರಾಜ ರಡರಟ್ಟಿ, ಮಾಲತೇಶ ಬಡಿಗೇರ, ಟಿ.ಎನ್. ಪ್ರಶಾಂತ್‌ಕುಮಾರ್, ಚಾಲಕರಾದ ಅಚ್ಚಯ್ಯ, ಅಶೋಕ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net