ಗ್ರಾಮ ಬಿಟ್ಟು ಹೊರಹೋಗದಿರಿ

26SPT01
Published on

ಎಸ್‌ಪಿ ಸುಮನ್ ಡಿ. ಪನ್ನೇಕರ್ ಸೂಚನೆ, ಬಳಗುಂದ, ಕರ್ಕಳ್ಳಿ ಸೀಲ್‌ಡೌನ್ ಪ್ರದೇಶಗಳಿಗೆ ಎಸ್‌ಪಿ ಭೇಟಿ

ಸೋಮವಾರಪೇಟೆ: ಸಮೀಪದ ಬಳಗುಂದ ಮತ್ತು ಕರ್ಕಳ್ಳಿ ಗ್ರಾಮದಲ್ಲಿ ಇಬ್ಬರಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಎರಡೂ ಗ್ರಾಮಗಳನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಯಿತು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.3 ರ ವಲ್ಲಭಭಾಯಿ ಬಡಾವಣೆಯ 40 ಮನೆಗಳು, ಬಳಗುಂದ ಕರ್ಕಳ್ಳಿ ವ್ಯಾಪ್ತಿ ಯ 371 ಮನೆಗಳನ್ನು ಕ್ಲಸ್ಟರ್ ಜೋನ್ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಯಿತು. ಗ್ರಾಮಗಳ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ಬ್ಯಾರಿಕೇಡ್ ಹಾಕಲಾಗಿದೆ. ಯಾರೂ ಮನೆಯಿಂದ ಹೊರ ಬರಬಾರದು, ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದು ಎಂದು ತಹಸೀಲ್ದಾರ್ ಗೋವಿಂದರಾಜ್ ಆದೇಶ ನೀಡಿದ್ದಾರೆ.

ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಪ್ರತಿ ಕುಟುಂಬಗಳನ್ನು ಭೇಟಿ ಮಾಡಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಪಟ್ಟಣ ಸೇರಿ ಸೀಲ್‌ಡೌನ್ ಪ್ರದೇಶಗಳಲ್ಲಿ ಸೋಂಕು ನಿವಾರಕ ಔಷಧ ಸಿಂಪಡಿಸಲಾಯಿತು.
ಎಸ್‌ಪಿ ಭೇಟಿ: ಸೀಲ್‌ಡೌನ್ ಆದ ಗ್ರಾಮಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಂಕು ತಡೆಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು. ಮುಂದಿನ ಆದೇಶದ ವರೆಗೆ ಯಾರೂ ಗ್ರಾಮವನ್ನು ಬಿಟ್ಟು ಹೋಗಬಾರದು ಎಂದು ನಿರ್ದೇಶನ ನೀಡಿದರು. ಡಿವೈಎಸ್‌ಪಿ ಶೈಲೇಂದ್ರ, ಸಿ.ಐ. ನಂಜುಂಡೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net