ಮಡಿಕೇರಿ ತಾಲೂಕು ವ್ಯಾಪ್ತಿಯ ೨ನೇ ಮೊಣ್ಣಂಗೇರಿಯಲ್ಲಿ ಮತ್ತೊಮ್ಮೆ ಜಲಸ್ಫೋಟಗೊಂಡು ಆತಂಕ ಸೃಷ್ಟಿಯಾಗಿದೆ. ೨೦೧೮ ರಲ್ಲಿ ಈ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಜಲಸ್ಫೋಟಗೊಂಡು ಅಪಾಯಕಾರಿ ಭೂಕುಸಿತ ಉಂಟಾಗಿತ್ತು. ಸೋಮವಾರ ರಾತ್ರಿ ಜಲಸ್ಫೋಟ ದೊಂದಿಗೆ ಭೂಕುಸಿತ ಉಂಟಾಗಿದೆ.
ನಡುರಾತ್ರಿ ಭಾರೀ ಶಬ್ಧದೊಂದಿಗೆ ಭೂಕುಸಿತ ಉಂಟಾಗಿದ್ದು, ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. ೨ನೇ ಮೊಣ್ಣಂಗೇರಿಯ ರಾಮಕೊಲ್ಲಿಯಲ್ಲಿ ಈ ಘಟನೆ ನಡೆದಿದೆ.