

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡಗು ಪ್ರೆಸ್ ಕ್ಲಬ್ ೨೪ನೇ ವಾರ್ಷಿಕೋತ್ಸವ ಹಾಗೂ ಪ್ರೆಸ್ ಕ್ಲಬ್ ಡೇ ಪ್ರಯುಕ್ತ ಮಡಿಕೇರಿಯ ಪತ್ರಿಕಾ ಭವನದಲ್ಲಿ ಸದಸ್ಯರು ಹಾಗೂ ಸದಸ್ಯರ ಕುಟುಂಬ ಸದಸ್ಯರಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು.
ಮಕ್ಕಳ ಬಿಸ್ಕೆಟ್ ತಿನ್ನುವ ಸ್ಪರ್ಧೆ ಶಶಾಂಕ್ ಪ್ರಥಮ, ಪ್ರೀಶ್ಮ ದ್ವಿತೀಯ, ಜೀಶ್ಮ ತೃತೀಯ. ಬಲೂನ್ ಮತ್ತು ಲೋಟ ಸ್ಪರ್ಧೆಯಲ್ಲಿ ನಿಶಾಂಕ್ (ಪ್ರ), ಶಶಾಂಕ್ (ದ್ವಿ), ಲಕ್ಷಿತಾ (ತೃ). ಕ್ಲಬ್ ಸದಸ್ಯರಿಗೆ ನಡೆದ ಬಲೂನ್ ಒಡೆಯುವ ಸ್ಪರ್ಧೆಯಲ್ಲಿ ರಿಜ್ವಾನ್ (ಪ್ರ), ಚೈತನ್ಯ ಚಂದ್ರಮೋಹನ್ (ದ್ವಿ), ಕೃಷ್ಣ (ತೃ).
ಸದಸ್ಯರ ಕುಟುಂಬದ ಮಹಿಳೆಯರಿಗಾಗಿ ನಡೆದ ಸ್ಟ್ರಾಬಾಲ್ ಸ್ಪರ್ಧೆಯಲ್ಲಿ ಅರ್ಚನಾ (ಪ್ರ), ದೀಪಾ ಅನು ಕಾರ್ಯಪ್ಪ (ದ್ವಿ), ಅನುರಾಧ (ತೃ), ಒಗಟು ಬಿಡಿಸುವ ಸ್ಪರ್ಧೆಯಲ್ಲಿ ಜಯಲಕ್ಷ್ಮೀ ನಂಜುಂಡಸ್ವಾಮಿ, ಪ್ರದೀಪ್‌ಕುಮಾರ್, ವಿನು ಕುಶಾಲಪ್ಪ, ಸದಸ್ಯರಿಗೆ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ವಿಶ್ವಕುಂಬೂರು (ಪ್ರ), ತೇಜಸ್ ಪಾಪಯ್ಯ (ದ್ವಿ) ಬಹುಮಾನ ಪಡೆದರು.
ಸದಸ್ಯರ ಮಕ್ಕಳಿಗೆ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಪೊನ್ನೇಟಿ ತಿಷ್ಯಾ ಸುನಿಲ್ (ಪ್ರ), ಪೋಕ್ಷಾ ತೇಜಸ್ (ದ್ವಿ), ದೀಕ್ಷಾ (ತೃ), ಮಕ್ಕಳ ಗಾಯನ ಸ್ಪರ್ಧೆಯಲ್ಲಿ ಅಪೂರ್ವ (ಪ್ರ), ಪೊನ್ನೇಟಿ ತಿಷ್ಯಾ ಸುನಿಲ್ (ದ್ವಿ), ಲಕ್ಷಿತಾ (ತೃ), ಸದಸ್ಯರ ಗಾಯನ ಸ್ಪರ್ಧೆಯಲ್ಲಿ ನಂಜುಂಡಸ್ವಾಮಿ (ಪ್ರ), ಚೆನ್ನನಾಯಕ್ (ದ್ವಿ), ಪ್ರಜ್ಞಾ ರಾಜೇಂದ್ರ (ತೃ), ಮಕ್ಕಳ ನೃತ್ಯ ಸ್ಪರ್ಧೆಯಲ್ಲಿ ಪುತ್ತಂ ಪ್ರೀಷ್ಮಾ (ಪ್ರ), ಪರಿಧಿ ಪೊನ್ನಮ್ಮ (ದ್ವಿ), ಸಾಗರಿಕ ನಾಗೇಶ್ (ತೃ) ಬಹುಮಾನ ಪಡೆದರು. ತೀರ್ಪುಗಾರರಾಗಿ ರೇವತಿ ರಮೇಶ್, ಪ್ರತಿಮಾ ಹರೀಶ್ ರೈ ಕಾರ್ಯ ನಿರ್ವಸಿದರು.