ಜನವರಿ ೨೨ ರಂದು ಪತ್ರಕರ್ತರ ಕ್ರಿಕೆಟ್ ಹಬ್ಬ

4mdkn5 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಜನವರಿ ೨೨ ರಂದು ಪತ್ರಕರ್ತರ ಕ್ರಿಕೆಟ್ ಹಬ್ಬ ಆಯೋಜಿಸಲಾಗಿದೆ. ೩ನೇ ವರ್ಷ ಆಯೋಜಿಸಲ್ಪಟ್ಟಿರುವ ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್‌ನಲ್ಲಿ ಕೊಡಗಿನ ೧೦೩ ಪತ್ರಕರ್ತರು ಪಾಲ್ಗೊಳ್ಳಲಿದ್ದಾ ರೆಂದು ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಡಗು ಪ್ರೆಸ್ ಕ್ಲಬ್ ನಿರ್ದೇಶಕ ನವೀನ್ ಡಿಸೋಜ ಸಂಚಾಲಕತ್ವದಲ್ಲಿ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಗೆ ಸಕಲ ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ. ನ.೨೦ ರಂದು ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ. ೮ ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ೯೪ ಸಾವಿರ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ೫೫ ಸಾವಿರ ರೂಪಾಯಿ ನಗದು ಬಹುಮಾನದೊಂದಿಗೆ ಟ್ರೋಫಿ ನೀಡಲಾಗುತ್ತದೆ.

೩ ಮತ್ತು ೪ನೇ ಸ್ಥಾನ ಪಡೆಯುವ ತಂಡಕ್ಕೆ ತಲಾ ೧೦ ಸಾವಿರ ಹಾಗೂ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಇತರೆ ನಾಲ್ಕು ತಂಡಗಳಿಗೆ ತಲಾ ೫ ಸಾವಿರ ರೂಪಾಯಿ ನೀಡಲಾಗುತ್ತದೆ. ಪಂದ್ಯಾವಳಿಯಲ್ಲಿ ಉತ್ತಮ ಆಟದ ಪ್ರದರ್ಶನ ನೀಡುವ ಆಟಗಾರರಿಗೆ ವೈಯುಕ್ತಿಕ ಬಹುಮಾನ ನೀಡಲಾಗುತ್ತದೆ. ಪ್ರತಿ ಪಂದ್ಯದಲ್ಲಿಯೂ ಉತ್ತಮ ಆಟದ ಪ್ರದರ್ಶನ ನೀಡುವ ಒಬ್ಬ ಆಟಗಾರನಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ.

ಮಂಡೇಡ ಅಶೋಕ್ ಫ್ರಾಂಚೈಸಿ ಆಗಿರುವ ಕಿಶೋರ್ ರೈ ಕತ್ತಲೆಕಾಡು ನಾಯಕತ್ವದ ಗೋಣಿಕೊಪ್ಪ ಮೀಡಿಯಾ ಕಿಂಗ್ಸ್, ಜಯಪ್ರಕಾಶ್ ಫ್ರಾಂಚೈಸಿ ಆಗಿರುವ ಶಿವರಾಜ್ ನಾಯಕತ್ವದ ಸೆನ್ಸಾ ಕುಶಾಲನಗರ, ಡಿ.ನಾಗೇಶ್ ಫ್ರಾಂಚೈಸಿ ಆಗಿರುವ ಹೇಮಂತ್ ಮಾಸ್ಟರ್ ನಾಯಕತ್ವದ ಇಂಚರ ಕೊಡಗು ೧೧, ಚೀಯಂಡಿ ತೇಜಸ್ ಪಾಪಯ್ಯ ಫ್ರಾಂಚೈಸಿ ಆಗಿರುವ ಪ್ರೇಮ್ ಕಸ್ತೂರಿ ನಾಯಕತ್ವದ ಕೂರ್ಗ್ ಮೌಂಟ್ ಲಿನ್ಸ್, ಬೊಳ್ಳಜೀರ ಬಿ. ಅಯ್ಯಪ್ಪ ಫ್ರಾಂಚೈಸಿ ಆಗಿರುವ ಕೆ.ಎಂ. ವಿನೋದ್ ನಾಯಕತ್ವದ ಮೀಡಿಯಾ ವಾರಿಯರ್ಸ್, ಕೆ.ಬಿ. ಶಂಷುದ್ದೀನ್ ಫ್ರಾಂಚೈಸಿ ಆಗಿರುವ ಕೆ.ಎಂ. ಇಸ್ಮಾಯಿಲ್ ನಾಯಕತ್ವದ ಮೀಡಿಯಾ ಸೂಪರ್ ಕಿಂಗ್ಸ್, ಪುತ್ತಂ ಪ್ರದೀಪ್ ಫ್ರಾಂಚೈಸಿ ಆಗಿರುವ ಲೋಕೇಶ್ ಕಾಟಕೇರಿ ನಾಯಕತ್ವದ ಮೀಡಿಯಾ ಕ್ಯಾಪ್ಟನ್ ೧೨ ಹಾಗೂ ಕೆ.ಕೆ. ರೆಜಿತ್‌ಕುಮಾರ್ ಫ್ರಾಂಚೈಸಿ ಆಗಿರುವ ಎ.ಎಸ್. ಮುಸ್ತಫಾ ನಾಯಕತ್ವದ ಮೀಡಿಯಾ ಕೂಲ್ ೧೧ ತಂಡಗಳು ಪಂದ್ಯವಳಿಯಲ್ಲಿ ಪಾಲ್ಗೊಳ್ಳಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net