ಕೊಡಗು ಪ್ರೆಸ್ ಕ್ಲಬ್ ಪ್ರಶಸ್ತಿ ಹಿರಿಕರ ರವಿ ಮುಡಿಗೆ

hirikara RAVI
Published on

ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಗೆ ಹಿರಿಕರ ರವಿ ಭಾಜನರಾಗಿದ್ದಾರೆ ಎಂದು ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಕೆ.ರೆಜಿತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕೆ.ಬಿ.ಮಹಾಂತೇಶ್ ಸ್ಮರರ್ಥ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ವಾರ್ಷಿಕವಾಗಿ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಜಾಸತ್ಯ ಪತ್ರಿಕೆಯಲ್ಲಿ ೫-೦೭-೨೦೨೨ ರಂದು ಕತ್ತಲಲ್ಲಿ ಕಮರುತ್ತಿದೆ ಕಿಬ್ಬೆಟ್ಟ ಗಿರಿಜನರ ಬದುಕು ಶಿರೋನಾಮೆಯಲ್ಲಿ ಪ್ರಕಟವಾದ ವಿಶೇಷ ವರದಿ ಪ್ರಶಸ್ತಿಗೆ ಆಯ್ಕೆಯಾಗಿದೆ.


ಜೂ.೨೫ ರಂದು ಮಡಿಕೇರಿಯಲ್ಲಿರುವ ಪತ್ರಿಕಾ ಭವನದಲ್ಲಿ ಆಯೋಜಿಸಿರುವ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ೫,೦೦೦ ರೂಪಾಯಿ, ಪ್ರಶಸ್ತಿ ಫಲಕ ಇರುತ್ತದೆ ಎಂದು ರಜಿತ್‌ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net