ಜಿಲ್ಲಾ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಎಚ್.ಪಿ. ರವೀಶ್ ಪುನರಾಯ್ಕೆ

31mdkd1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಘಟಕ ಜಿಲ್ಲಾಧ್ಯಕ್ಷರಾಗಿ ಎಚ್.ಪಿ. ರವೀಶ್ ಪುನರಾಯ್ಕೆಗೊಂಡಿದ್ದಾರೆ.

ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮುಂದಿನ ೩ ವರ್ಷ ಅವಧಿಗೆ ಕೊಡಗು ಜಿಲ್ಲಾ ಸಮಿತಿ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷೆರಾಗಿ ವೀಣಾ, ಲೋಕೇಶ್, ಖಜಾಂಚಿಯಾಗಿ ರಾಜಶೇಖರ, ರಾಜ್ಯ ಪರಿಷತ್ ಸ್ಥಾನಕ್ಕೆ ಬಿ.ವೈ. ಅಶೋಕ್‌ಕುಮಾರ್, ಲೋಕೇಶ್, ಸಂಘಟನಾ ಕಾರ್ಯದರ್ಶಿಯಾಗಿ ಪುಟ್ಟರಾಜು, ಲಿಖಿತಾ, ಕ್ರೀಡಾ ಕಾರ್ಯ ದರ್ಶಿಯಾಗಿ ನಂಜುಂಡಸ್ವಾಮಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಶಿಕಿರಣ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಡಿಕೇರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಚುನಾವಣಾ ಜವಾಬ್ದಾರಿಯನ್ನು ಸಹಾಯಕ ಚುನಾವಣಾಧಿಕಾರಿ ಮೋಹನ್‌ಕುಮಾರ್, ಚುನಾವಣಾ ಸಿಬ್ಬಂದಿ ಹುಸೇನ್ ಮುಲ್ಲಾ, ದೀಪ್ತಿ ಕಾರ್ಯನಿರ್ವಹಿಸಿದರು. ನೊಂದಣಿಯಾದ ೭೮ ಮತದಾರರಲ್ಲಿ ೭೫ ಮತದಾರರು ಮತ ಚಲಾಯಿಸಿದರು.

ಕಾನೂನು ಸಲೆಹೆಗಾರ ಹಾಗೂ ಗೌರವಾಧ್ಯಕ್ಷ ಹುದ್ದೆಗೆ ಜಿಲ್ಲಾ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗುವುದೆಂದು ಜಿಲ್ಲಾಧ್ಯಕ್ಷ ಎಚ್.ಪಿ. ರವೀಶ್ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net