ಮತ್ತೆ ನಾಲ್ವರಿಗೆ ವಕ್ಕರಿಸಿದ ಕರೊನಾ

IMG_20200627_151708
Published on

ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆ

ಮಡಿಕೇರಿ: ಜಿಲ್ಲೆಯಲ್ಲಿ ಹೊಸದಾಗಿ 4 ಕೋವಿಡ್ ಸೋಂಕು ಪ್ರಕರಣ ಶನಿವಾರ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.
40 ಪ್ರಕರಣದಲ್ಲಿ 3 ಪ್ರಕರಣ ಬಿಡುಗಡೆಗೊಂಡಿದ್ದು, 37 ಪ್ರಕರಣಗಳು ಸಕ್ರಿಯವಾಗಿವೆ. ಶನಿವಾರ ಪತ್ತೆಯಾದ ಪ್ರಕರಣದಲ್ಲಿ ಬೆಂಗಳೂರು ಪ್ರಯಾಣ ಇತಿಹಾಸವಿರುವ 33 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಇವರನ್ನು ನೇರವಾಗಿ ಕೊಡಗು ವೈದ್ಯಕೀಯ ಸಂಸ್ಥೆ ಅಧೀನದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಡಿಕೇರಿ ತಾಲೂಕು ಮೂರ್ನಾಡು ಬಳಿಯ ಸುಭಾಷ್ ನಗರದ ಆರೋಗ್ಯ ಕಾರ್ಯಕರ್ತೆಗೆ ಸೋಂಕು ದೃಢಪಟ್ಟಿದೆ. ಕೊಡ್ಲಿಪೇಟೆ ಹೋಬಳಿ ಶಿರಂಗಾಲ ಗ್ರಾಮದ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ 14 ವರ್ಷದ ಹುಡುಗಿಗೆ ಮತ್ತು ಕುಶಾಲನಗರದ ಹುಲುಸೆ ಗ್ರಾಮದ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ 8 ವರ್ಷದ ಹುಡುಗನಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
19 ಸೀಲ್‌ಡೌನ್ ಪ್ರದೇಶ: ಮಡಿಕೇರಿ ತಾಲೂಕಿನ ಓಂಕಾರೇಶ್ವರ ದೇವಾಲಯ ರಸ್ತೆ, ಕೋಟೆ ಮಾರಿಯಮ್ಮ ದೇವಾಲಯ ರಸ್ತೆ, ಡೇರಿ ಫಾರ್ಮ್, ಪುಟಾಣಿ ನಗರ, ತಾಳತ್‌ಮನೆ, ಕೊಳಗದಾಳು, ಕಗ್ಗೋಡ್ಲು, ಸುಭಾಷ್ ನಗರ ಸೇರಿ 8 ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಸೋಮವಾರಪೇಟೆ ತಾಲೂಕಿನ ಶಿರಂಗಾಲ, ದೊಡ್ಡಳ್ಳಿ, ಮುಳ್ಳೂರು, ಬಳಗುಂದ, ಹುಲುಸೆ, ರಥಬೀದಿ (ಕುಶಾಲನಗರ), ಕರ್ಕಳ್ಳಿ, ನೆಲ್ಲಿಹುದಿಕೇರಿ 8 ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ, ಪಾಲಿಬೆಟ್ಟ, ಹುಂಡಿ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net