

ಮಡಿಕೇರಿ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿಗೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಯಾವ ಕೊಡವರು ಭಾಗಿಯಾಗಿಲ್ಲ. ಇದು ಹಣಕೊಟ್ಟು ಕರೆಸಿದ್ದ ಪುಡಾರಿಗಳು ಮಾಡಿದ ಕೆಲಸ ಎಂದು ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.
ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆದು ರಾಜಕೀಯ ಲಾಭ ಪಡೆಯುವ ಷಡ್ಯಂತ್ರಕ್ಕೆ ಕೊಡಗಿನ ಜನತೆ ಮತ್ತೆ ಬಲಿಯಾಗಬಾರ ದೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಜನಪ್ರತಿನಿಧಿಗಳು, ರಾಜಕೀಯ ಮುಖಂಡರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಜನ ಪ್ರಶ್ನಿಸಿ ಉತ್ತರ ಪಡೆದುಕೊಳ್ಳಬೇಕು. ಆದರೆ, ಬಿಜೆಪಿ ಜನಪ್ರತಿನಿಧಿಗಳು, ಮುಖಂಡರು ಜನರ ಯಾವ ಪ್ರಶ್ನೆಗೂ ಉತ್ತರ ನೀಡುವುದಿಲ್ಲ. ಭಾವನಾತ್ಮಕ ವಿಷಯ ಮುಂದಿಟ್ಟುಕೊಂಡು ರಾಜಕೀಯ ಲಾಭ ಮಾಡುತ್ತಾ ಬಂದಿದ್ದಾರೆಂದು ಟೀಕಿಸಿದರು.
ಬಸವರಾಜ ಬೊಮ್ಮಾಯಿ ಕೊಡಗಿಗೆ ಏಕೆ ಅನುದಾನ ಘೋಷಿಸಿಲ್ಲ ಎಂದು ನಾವು ಪ್ರಶ್ನಿಸಿದ್ದರೆ ಮೊಟ್ಟೆ ಹೊಡೆಯುತ್ತಾರೆ. ತಡೆಗೋಡೆ ಕಳಪೆ ಯಾಗುತ್ತಿರುವ ಬಗ್ಗೆ ಪ್ರಶ್ನಿಸಿದರೆ ಉತ್ತರಿಸುವುದಿಲ್ಲ. ಮೂಲಭೂತ ಸವಲತ್ತು ಕೊಡಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು ಎದುರಿಸುತ್ತಿ
ರುವ ಸಮಸ್ಯೆಗಳಿಗೆ ಇವರ ಪರಿಹಾರ ಇಲ್ಲ. ಹೀಗಿದ್ದರೂ ೨೫ ವರ್ಷದಿಂದ ಗೂಟ ಹೊಡೆದುಕೊಂಡು ಕೂತಿದ್ದಾರೆಂದು ದೂಷಿಸಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದ ಐದು ವರ್ಷದ ಅವಧಿಯಲ್ಲಿ ಕೊಡಗಿಗೆ ೩ ಸಾವಿರ ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಬಾಳುಗೋಡಿ ನಲ್ಲಿರುವ ಕೊಡವ ಸಾಂಸ್ಕೃತಿಕ ಕೇಂದ್ರಕ್ಕೆ ೩ ಕೋಟಿ ರೂ. ನೀಡಿದ್ದಾರೆ. ಕೊಡವ ಹೆರಿಟೇಜ್ ಸೆಂಟರ್‌ಗೆ ಸಿದ್ದರಾಮಯ್ಯ ಅನುದಾನ ಒದಗಿಸಿ ದ್ದಾರೆಂದರು.
ಜಾತಿ, ಧರ್ಮದ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ದ್ವೇಷದ ರಾಜಕರಣ ಮಾಡುತ್ತಿದೆ. ಜನಪ್ರತಿನಿಧಿಗಳಾಗಿ ಇವರೆಷ್ಟು ಪರಿಣಾಮಕಾರಿ ಯಾಗಿ ಜನರ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದ್ದಾರೆಂದು ಜನ ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳಬೇಕು. ಇದಕ್ಕೆ ಮುಂದಿನ ವಿಧಾನಸಭೆ ಚುನಾವಣೆ ಸಂದರ್ಭ ಉತ್ತರ ನೀಡಬೇಕೆಂದು ಮನವಿ ಮಾಡಿದರು.
ಕೊಡಗು ಲೂಟಿ ಆಗುತ್ತಿರುವುದು ಯಾರಿಂದ ಎಂದು ಜನ ಅರಿತುಕೊಳ್ಳಬೇಕು. ಜನರನ್ನು ಜಾತಿ, ಧರ್ಮದ ಹೆಸರಿನಲ್ಲಿ ಪ್ರಚೋದಿಸುವು ದರ ಮೂಲಕ ರಾಜಕೀಯ ಲಾಭ ಪಡೆಯುವವರು ಯಾರೆಂದು ಜನ ಚಿಂತಿಸಬೇಕು. ಕೊಡಗಿನ ಇಬ್ಬರು ಶಾಸಕರು ಸೋಲು ಅನುಭವಿ ಸುತ್ತಾರೆಂದು ಪೊಲೀಸ್ ಗುಪ್ತಚಾರ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದರಿಂದ ಭಯಭೀತರಾಗಿದ್ದಾರೆಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಸಾಮಾಜಿಕ ಜಾಲತಾಣ ಘಟಕ ಜಿಲ್ಲಾಧ್ಯಕ್ಷ ಹೊಸೂರು ಸೂರಜ್ ಗೋಷ್ಠಿಯಲ್ಲಿದ್ದರು.
ಕಾಂಗ್ರೆಸ್‌ಗೆ ಅವಕಾಶ ನೀಡಬೇಕು
ಆ.೨೬ ರಂದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ನಿರ್ಧಾರವನ್ನು ಕಾಂಗ್ರೆಸ್ ಆ.೧೮ ರಂದು ಪ್ರಕಟಿಸಿದೆ. ಇದನ್ನು ತಡೆಯುವ ಉದ್ದೇಶದಿಂದ ಅದೇ ದಿನ ಬಿಜೆಪಿ ಜನಜಾಗೃತಿ ಸಮಾವೇಶ ನಡೆಸಲು ಮುಂದಾಗಿದೆ ಎಂದು ಕೆಪಿಸಿಸಿ ವಕ್ತಾರ ಎ.ಎಸ್. ಪೊನ್ನಣ್ಣ
ಟೀಕಿಸಿದ್ದಾರೆ.
ಜಿಲ್ಲಾಡಳಿತ ಕಾಂಗ್ರೆಸ್ ಪ್ರತಿಭಟನೆಗೆ ಅವಕಾಶ ನೀಡಬೇಕು. ಅಹಿತಕರ ಘಟನೆ ನಡೆಯದ್ದಂತೆ ಎಚ್ಚರ ವಹಿಸಲು ಆ.೨೬ ರಂದು ಬಿಜೆಪಿ ಸಮಾವೇಶಕ್ಕೆ ಅವಕಾಶ ನೀಡಬಾರದು. ಕಾಂಗ್ರೆಸ್- ಬಿಜೆಪಿ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡುವುದಾದ್ದಲ್ಲಿ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕೆಂದರು.
೨೬ ರಂದು ಕೊಡಗಿನಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಬಾರದು. ಆಡಳಿತ ವೈಫಲ್ಯದ ವಿರುದ್ಧ ಬಿಜೆಪಿ ನಿರಂತರ ಜನಜಾಗೃತಿ ಮಾಡಲಿ. ಜನ ಪ್ರಜ್ಞಾವಂತರಾಗಿದ್ದಾರೆ. ಜಾಥಿ ಆಧಾರಿತ ರಾಜಕರಣ ಮಾಡುವ ಬಿಜೆಪಿಗೆ ಮತದಾರರು ಮುಂದಿನ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆಂದರು.