ಮೊಂಬತ್ತಿ ಬೆಳಗಿಸಿ ಕಾರ್ಗಿಲ್ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ

27mdkj1 - Copy
Published on

ಮಡಿಕೇರಿ: ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕದಲ್ಲಿನ ಅಮರ್ ಜವಾನ್ ಯುದ್ಧ ಸ್ಮಾರಕ ಬಳಿ ಮಂಗಳವಾರ ಸಂಜೆ ಮೊಂಬತ್ತಿ ಬೆಳಗಿಸಿ ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಭಾವಪೂರ್ಣ ಶದ್ಧಾಂಜಲಿ ಸಲ್ಲಿಸಲಾಯಿತು.


ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಮಾತನಾಡಿ, ಕಾರ್ಗಿಲ್ ಎಂಬ ಎತ್ತರದ ಶಿಖರ ಶ್ರೇಣಿಯನ್ನು ಪಾಕಿಸ್ತಾನದ ಕೈ ವಶದಿಂದ ಮರಳಿ ಭಾರತದ ತೆಕ್ಕೆಗೆ ಪಡೆಯುವುದು ಸುಲಭ ಸಾಧ್ಯವಾದ ಕಾರ್ಯವಾಗಿರಲಿಲ್ಲ. ಭಾರತದ ಧೀರ ಸೈನಿಕರ ಛಲ, ಬುದ್ಧಿವಂತಿಕೆ, ಎದೆಗಾರಿಕೆಯಿಂದ ಕಾರ್ಗಿಲ್ ಮತ್ತೆ ಭಾರತದ ವಶವಾಯಿತ್ತೆಂದರು.

ಕಾರ್ಗಿಲ್ನಲ್ಲಿ ವಿಜಯ ಸಾಧಿಸಿದ ನೆನಪಿನಲ್ಲಿ ವರ್ಷಕ್ಕೊಂದು ದಿನ ವಿಜಯೋತ್ಸವ ಆಚರಿಸಲಾಗುತ್ತಿದೆ. ಹೀಗಾಗದೇ ಪ್ರತಿ ನಿತ್ಯವೂ ಭಾರತ ದ ಹೆಮ್ಮೆಯ ಸೈನಿಕರನ್ನು ಸ್ಮರಿಸಿಕೊಳ್ಳುವಂತಾಗಬೇಕು. ಯುದ್ಧದಲ್ಲಿ ಪಾಲ್ಗೊಂಡ ಮತ್ತು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳುವ ಮಾಜಿ ಸೈನಿಕರನ್ನೂ ಸಮಾಜ ಗೌರವದಿಂದ ಕಾಣಬೇಕೆಂದರು.

ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಯೋಧರು ದೇಶಕ್ಕಾಗಿ ಹಗಲಿರುಳು ಕಾರ್ಯನಿರ್ವಹಿಸುತ್ತಿರುತ್ತಾರೆ. ಇಂಥ ಯೋಧರಿಗೆ ಮತ್ತು ಅವರ ಕುಟುಂಬದವರಿಗೆ ನಾಗರಿಕ ಸಮಾಜ ಸದಾ ಋಣಿಯಾಗಿರಬೇಕೆಂದರು. ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ ಮಾತನಾಡಿ, ಕಾರ್ಗಿಲ್ಗಾಗಿ ಹುತಾತ್ಮರಾದ ವೀರರ ಬಲಿದಾನದ ಸ್ಮರಣೆಯ ದಿನವನ್ನಾಗಿಯೂ ಗಮನಿಸಬೇಕೆಂದರು.

ರೋಟರಿ ಸಂಸ್ಥೆ ಪ್ರಮುಖರಾದ ಎಚ್.ಟಿ. ಅನಿಲ್, ಪ್ರಮೋದ್ ಕುಮಾರ್ ರೈ, ರವೀಂದ್ರ ರೈ, ಮೋಹನ್ ಪ್ರಭು, ಅಂಬೆಕಲ್ ವಿನೋದ್, ಅಂಬೆಕಲ್ ಜೀವನ್, ಡಿ.ಎಂ. ತಿಲಕ್, ರವಿಶಂಕರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net