

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಜೆಡಿಎಸ್ ಪಕ್ಷದ ಮಡಿಕೇರಿ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಎಂದು ಬಿಂಬಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿ ನಾಪಂಡ ಎಂ. ಮುತ್ತಪ್ಪ ಅವರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ನೋಟೀಸ್ ಜಾರಿ ಮಾಡಿದ್ದಾರೆ.
ರಾಜ್ಯದ ವರಿಷ್ಠರ ಆದೇಶವಿಲ್ಲದೆ ಪಂಚರತ್ನ ಕಾರ್ಯಕ್ರಮ ಎಂದು ಹೇಳಿಕೊಂಡು ವಾಹನಗಳಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರವಾರು ಅಭ್ಯರ್ಥಿ ಎಂದು ಬಿಂಬಿಸುವುದು ಮತ್ತು ತಮ್ಮ ಪರಿಚಯ ಪ್ರಚಾರ ಮಾಡುವುದು ಸರಿಯಲ್ಲ. ವರಿಷ್ಠರ ಆದೇಶದಂತೆ ನಡೆಯಬೇಕೆ ವಿನಾ ಸ್ವಯಂ ಪ್ರೇರಿತವಾಗಿ ಪಕ್ಷದೊಳಗೆ ಬಿಕ್ಕಟ್ಟನ್ನು ಹಾಗೂ ಭಿನ್ನಾಭಿಪ್ರಾಯ ತರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ನೋಟೀಸ್‌ನಲ್ಲಿ ಆಕ್ಷೇಪ ವ್ಯಕ್ತ ಪಡಿಸಲಾಗಿದೆ.
ಮಡಿಕೇರಿ ಕ್ಷೇತ್ರಕ್ಕೆ ಹಲವಾರು ಆಕಾಂಕ್ಷಿಗಳಿದ್ದು, ಎಲ್ಲರನ್ನು ಒಗ್ಗೂಡಿಸಿ ಪಕ್ಷದಲ್ಲಿ ಯಾವುದೇ ಒಡಕುಂಟಾಗದಂತೆ ಕಾರ್ಯಪ್ರವೃತ್ತರಾಗ ಬೇಕು. ತಾವು ಇದನ್ನೆಲ್ಲ ತಿರಸ್ಕರಿಸಿ ಕೆಲವು ಜನರನ್ನು ಬಳಸಿಕೊಂಡು ಮಡಿಕೇರಿ ಕ್ಷೇತ್ರ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡುತ್ತಿ
ರುವುದು ಪಕ್ಷಕ್ಕೆ ಕಿರಿಕಿರಿ ಉಂಟು ಮಾಡುತ್ತಿದೆ. ಈಗಾಗಲೇ ತಾವು ಹೊರಡಿಸಿರುವ ವಾಹನವನ್ನು ತಡೆಹಿಡಿದು ರಾಜ್ಯ ವರಿಷ್ಠರ ಆದೇಶ ದಂತೆ ನಡೆಯುವುದು ಸೂಕ್ತ. ತಮ್ಮ ಈ ನಡವಳಿಕೆಯಿಂದ ಪಕ್ಷದ ಕಾರ್ಯಕರ್ತರಿಗೂ ಮತ್ತು ಜಿಲ್ಲಾ ನಾಯಕರುಗಳಿಗೂ ಗೊಂದಲ ವೇರ್ಪಡುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ರಾಜ್ಯ ವರಿಷ್ಠರು ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡದ ಕಾರಣ ಯಾರು ಕೂಡ ಜೆಡಿಎಸ್ ಪಕ್ಷದ ಸ್ವಯಂ ಘೋಷಿತ ಅಭ್ಯರ್ಥಿ ಎಂದು ಘೋಷಿಸುವುದು ಜೆಡಿಎಸ್ ಪಕ್ಷದ ಹಿತದೃಷ್ಟಿಯಿಂದ ಶುದ್ಧ ಅಪರಾದ. ಇದರಿಂದ ಪಕ್ಷದ ಕಾರ್ಯಕರ್ತ ರಿಗೂ ಮತ್ತು ಪಕ್ಷ ಸಂಘಟನೆಗೂ ತೊಂದರೆ ಏರ್ಪಡುವ ಲಕ್ಷಣಗಳು ಕಂಡು ಬರುತ್ತದೆ.
ನೋಟೀಸ್ ಸಿಕ್ಕ ೭ ದಿನದೊಳಗೆ ಸೂಕ್ತ ಸಮಜಾಯಿಸಿಕೆ ನೀಡಬೇಕು. ತಪ್ಪಿದಲ್ಲಿ ರಾಜ್ಯ ವರಿಷ್ಠರಿಗೆ ಪುಕಾರು ಕೊಟ್ಟು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಜ.೨೧ ರಂದು ನೀಡಿರುವ ನೋಟೀಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.