ರಾಷ್ಟ್ರಮಟ್ಟದ ಹಾಕಿಗೆ ಕೊಡಗು ಆತಿಥ್ಯ

Kodagu hosts national level hockey
Published on

ಮಡಿಕೇರಿ:

ಕ್ರೀಡಾ ತವರು ಕೊಡಗು ಇದೇ ಮೊದಲ ಬಾರಿಗೆ ಪೂರ್ಣಮಟ್ಟದಲ್ಲಿ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯೊAದರ ಆತಿಥ್ಯವಹಿಸುತ್ತಿದೆ. ಹಾಕಿ ಕ್ರೀಡೆಗೆ ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಜಿಲ್ಲೆ ಕೊಟ್ಟಿದ್ದರೂ ಈ ತನಕ ಇಲ್ಲಿ ದೇಶದ ಹಾಕಿ ಆಟಗಾರರನ್ನು ಒಂದೆಡೆ ಸೇರಿಸುವ ಪ್ರಯತ್ನ ನಡೆದಿರಲಿಲ್ಲ. ಇದೀಗ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಈ ಸಾಹಸಕ್ಕೆ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಈ ಪಂದ್ಯಾವಳಿ ಉದ್ಘಾಟಿಸಲು ಒಪ್ಪಿಗೆ ಕೊಟ್ಟಿದ್ದಾರೆ.\

ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ವರ್ಷಂಪ್ರತಿ ಆಯೋಜಿಸುತ್ತಾ ಬಂದಿರುವ ರಾಷ್ಟç ಮಟ್ಟದ ಪಂದ್ಯಾವಳಿಗಳ ಪೈಕಿ 17ರ ವಯೋಮಿತಿಯ ಬಾಲಕಿಯರ ಹಾಕಿ ಪಂದ್ಯಾವಳಿ ಸಂಘಟಿಸುವ ಅವಕಾಶ ಈ ಬಾರಿ ಕೊಡಗಿಗೆ ಸಿಕ್ಕಿದೆ. ಜನವರಿ 3ಕ್ಕೆ ಕುಶಾಲನಗರ ತಾಲೂಕು ಕೂಡಿಗೆ ಕ್ರೀಡಾ ಶಾಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘17ರ ವಯೋಮಿತಿಯ ಬಾಲಕಿಯರ 67ನೇ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿ’ಗೆ ಚಾಲನೆ ನೀಡಲಿದ್ದಾರೆ. ಅಂತಾರಾಷ್ಟಿçÃಯ, ರಾಷ್ಟಿçÃಯ ಹಾಗೂ ರಾಜ್ಯದ ಪ್ರಸಿದ್ಧ ಕ್ರೀಡಾಪಟುಗಳು ಈ ಸಂದರ್ಭಕ್ಕೆ ಸಾಕ್ಷಿ ಆಗಲಿದ್ದಾರೆ.

ದೇಶದ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ಪ್ರೌಢಶಾಲಾ ಬಾಲಕಿಯರು, ಕೇಂದ್ರೀಯ ವಿದ್ಯಾಸಂಸ್ಥೆಗಳ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 38 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕರ್ನಾಟಕದ ಮೊದಲ ಕ್ರೀಡಾ ಶಾಲೆ ಹೆಗ್ಗಳಿಕೆಯ, ರಾಷ್ಟç, ಅಂತಾರಾಷ್ಟಿçÃಯ ಮಟ್ಟಕ್ಕೆ ಹಲವು ಕ್ರೀಡಾಪಟುಗಳನ್ನು ನೀಡಿದ ಕೂಡಿಗೆ ಸರ್ಕಾರಿ ಕ್ರೀಡಾ ಶಾಲೆಯಲ್ಲಿ ಪಂದ್ಯಾವಳಿಯ ಉದ್ಘಾಟನೆಗೆ ಸಂಘಟಕರು ನಿರ್ಧರಿಸಿದ್ದಾರೆ.
ಹಾಕಿಯನ್ನೇ ಉಸಿರಾಡುವ ಕೊಡಗಿನ ಎಲ್ಲಾ ಭಾಗದಲ್ಲೂ ಈ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿಯನ್ನು ಹಬ್ಬದಂತೆ ಸಂಭ್ರಮಿಸಬೇಕು ಎನ್ನುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಪಂದ್ಯಾವಳಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಕೂಡಿಗೆ ಸರ್ಕಾರಿ ಕ್ರೀಡಾ ಶಾಲೆ ಮೈದಾನ ಮಾತ್ರವಲ್ಲದೆ ಮಡಿಕೇರಿಯ ಸಾಯಿ ಟರ್ಫ್ ಕ್ರೀಡಾಂಗಣ, ಸೋಮವಾರಪೇಟೆ ಟರ್ಫ್ ಕ್ರೀಡಾಂಗಣ ಹಾಗೂ ಪೊನ್ನಂಪೇಟೆ ಟರ್ಫ್ ಕ್ರೀಡಾಂಗಣದಲ್ಲಿ ಪಂದ್ಯಾವಳಿಗಳನ್ನು ನಡೆಸಲಾಗುತ್ತಿದೆ.

ಲೀಗ್ ಮಾದರಿಯಲ್ಲಿ ಪಂದ್ಯಾವಳಿ ಇದಾಗಿದ್ದು, ಪ್ರತಿ ಮೈದಾನದಲ್ಲೂ 2 ದಿನಗಳ ಕಾಲ ಪಂದ್ಯಾವಳಿ ನಡೆಯುತ್ತದೆ. ಬೆಳಗ್ಗೆ 6.30ರಿಂದ ಸಂಜೆ 6 ಗಂಟೆ ತನಕವೂ ನಿರಂತರವಾಗಿ ಪಂದ್ಯಾಟಗಳು ಇರುತ್ತದೆ. ಸಾರ್ವಜನಿಕರು, ಕ್ರೀಡಾಭಿಮಾನಿಗಳು ಮುಕ್ತವಾಗಿ ಪಂದ್ಯಾವಳಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಹೊರ ಜಿಲ್ಲೆ, ಪಕ್ಕದ ರಾಜ್ಯಗಳಿಂದಲೂ ಹಾಕಿ ಪ್ರೇಮಿಗಳು ಈ ಪಂದ್ಯಾವಳಿ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇದೆ.

ಪೂರ್ಣ ಪ್ರಮಾಣದಲ್ಲಿ ರಾಷ್ಟçಮಟ್ಟ ಯಾವುದೇ ಕ್ರೀಡಾಕೂಟ ಜಿಲ್ಲೆಯಲ್ಲಿ ಈತನಕ ಆಯೋಜಿಸುವ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಈಗ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಬಂದಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಜಿಲ್ಲೆಯ ಕ್ರೀಡಾಭಿಮಾನಿಗಳು ಉತ್ಸುಕರಾಗಿದ್ದಾರೆ. ಕ್ರೀಡಾ ತವರು, ಹಾಕಿಯ ತೊಟ್ಟಿಲು ಕೊಡಗಿನ ಗರಿಮೆಯನ್ನು ಈ ಮೂಲಕ ರಾಷ್ಟçಮಟ್ಟದಲ್ಲಿ ಪಸರಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಹಲವು ಸುತ್ತಿನ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದ್ದು, ಜಿಲ್ಲೆಯ ಎಲ್ಲರ ಸಹಕಾರದಿಂದ ಪಂದ್ಯಾವಳಿ ಯಶಸ್ಸಿಗೆ ಶ್ರಮಿಸಲಾಗುತ್ತಿದೆ.

ದೇಶದ ವಿವಿಧ ಭಾಗಗಳಿಂದ ಸುಮಾರು 500ಕ್ಕೂ ಹೆಚ್ಚು ಕ್ರೀಡಾಪಟುಗಳು, ಇವರ ಉಸ್ತುವಾರಿಗಳು, ಪಂದ್ಯಾವಳಿ ನಡೆಸಲು ತಾಂತ್ರಿಕ ವರ್ಗ ಹೀಗೆ ಸಾಕಷ್ಟು ಮಂದಿ ಪಂದ್ಯಾವಳಿ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇವರಿಗೆ ವಸತಿ, ಊಟ, ಪ್ರಯಾಣದ ವ್ಯವಸ್ಥೆ ಮಾಡಬೇಕಾಗುತ್ತದೆ. ಕ್ರೀಡಾ ಜಿಲ್ಲೆ ಕೊಡಗಿನ ಹೆಸರಿಗೆ ಕಳಂಕ ಬಾರದ ರೀತಿಯಲ್ಲಿ ಇವುಗಳನ್ನೆಲ್ಲಾ ವ್ಯವಸ್ಥಿತವಾಗಿ ಸಂಘಟಿಸಲು ಕೂಡ ಈಗಿನಿಂದಲೇ ತಯಾರಿ ನಡೆಸಲಾಗಿದೆ. ಪಂದ್ಯಾವಳಿಗೆ ಯಾವುದೇ ಲೋಪವಾಗದಂತೆ ನಡೆಸಲು ದೊಡ್ಡ ಮಟ್ಟದಲ್ಲಿ ಪೂರ್ವ ತಯಾರಿ ಮಾಡಲಾಗುತ್ತಿದೆ.


50ಕ್ಕೂ ಹೆಚ್ಚು ಹಾಕಿ ಪಟುಗಳು ಅಂತಾರಾಷ್ಟಿçÃಯ ಹಾಕಿಯಲ್ಲಿ ರಾಷ್ಟçವನ್ನು ಪ್ರತಿನಿಧಿಸಿದ್ದಾರೆ. 7 ಹಾಕಿ ಪಟ್ಟುಗಳು ಒಲಿಂಪಿಕ್ಸ್ನಲ್ಲಿ ಆಡಿದ್ದಾರೆ. ವರ್ಷಂಪ್ರತಿ ಇಲ್ಲಿ ನಡೆಯುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಜಗತ್ಪçಸಿದ್ಧವಾಗಿದೆ. 200ಕ್ಕೂ ಅಧಿಕ ತಂಡಗಳು ಒಂದೆಡೆ ಸೇರಿ ಹಾಕಿಯನ್ನು ಈ ರೀತಿಯಲ್ಲಿ ಸಂಭ್ರಮಿಸುವ ಸಂದರ್ಭ ಇನ್ನೆಲ್ಲೂ ಇಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಈ ರೀತಿ ಹಾಕಿಯ ತೊಟ್ಟಿಲು ಅನ್ನಿಸಿಕೊಂಡಿರುವ ಕೊಡಗು ಇದೇ ಮೊದಲ ಬಾರಿಗೆ 17ರ ವಯೋಮಿತಿಯ ಬಾಲಕಿಯರ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿಗೆ ಆತಿಥ್ಯ ವಹಿಸುತ್ತಿದೆ

ಕ್ರೀಡಾ ತವರು ಕೊಡಗು ಇದೇ ಮೊದಲ ಬಾರಿಗೆ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿಯೊAದಕ್ಕೆ ಸಾಕ್ಷಿ ಆಗುತ್ತಿದೆ. 17 ವರ್ಷ ಒಳಗಿನ ಬಾಲಕಿಯರ ಹಾಕಿ ಕ್ರೀಡಾ ಕೂಟ ಇದಾಗಿದೆ. ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶದ ಪ್ರೌಢಶಾಲೆ ಬಾಲಕಿಯರ ತಂಡ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ಕೊಡಗಿನ ಮಟ್ಟಿಗೆ ಇದೊಂದು ಹೆಮ್ಮೆಯ ಪಂದ್ಯಾವಳಿ ಆಗಿದ್ದು, ಯಶಸ್ವಿ ಪಂದ್ಯಾವಳಿಗಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಡಾ. ಸದಾಶಿವಯ್ಯ ಎಸ್. ಪಲ್ಲೇದ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ, ಕೊಡಗು

ಕೋಟ್:
ನಮ್ಮದೇ ಊರಿನಲ್ಲಿ ನಡೆಯುತ್ತಿರುವ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಸುತ್ತಿನ ಸಿದ್ಧತಾ ಸಭೆಗಳನ್ನು ನಡೆಸಲಾಗಿದೆ. ಸಾರ್ವಜನಿಕರು, ಕ್ರೀಡಾಭಿಮಾನಿಗಳ ಸಹಕಾರದಿಂದ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಇದು ಕ್ರೀಡಾಪ್ರೇಮಿಗಳ ಪಾಲಿಗೆ ಹಬ್ಬವೂ ಹೌದು.
ಟಿ.ಜಿ. ಪ್ರೇಮಕುಮಾರ್, ಮುಖ್ಯೋಪಾಧ್ಯಾಯ, ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು

ಕೊಡಗಿಗೆ ಕ್ರೀಡಾ ಜಿಲ್ಲೆ, ಹಾಕಿಯ ತವರು ಎನ್ನುವ ಹೆಸರಿದೆ. ರಾಷ್ಟçಮಟ್ಟದ ಪಂದ್ಯಾವಳಿ ಇಲ್ಲಿ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇದನ್ನೊಂದು ಹಬ್ಬದಂತೆ ಸಂಭ್ರಮಿಸಲಾಗುವುದು. ಪಂದ್ಯಾವಳಿ ಉದ್ಘಾಟನೆಗೆ ಬರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಪಂದ್ಯಾವಳಿ ಯಶಸ್ಸಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಕೂಡ ತೀವ್ರ ಆಸಕ್ತಿ ತೋರಿಸಿದ್ದು ಕೊಡಗಿನ ಹೆಸರು ರಾಷ್ಟçಮಟ್ಟದಲ್ಲಿ ರಾರಾಜಿಸುವ ರೀತಿಯಲ್ಲಿ ಪಂದ್ಯಾವಳಿ ಸಂಘಟಿಸಲಾಗುವುದು.
ವಿ.ಪಿ. ಶಶಿಧರ್, ಜಿ.ಪಂ. ಮಾಜಿ ಸದಸ್ಯ

ರಾಷ್ಟçಮಟ್ಟದ ಪಂದ್ಯಾವಳಿ ನಮ್ಮ ಊರಿನಲ್ಲಿ ನಡೆಯುತ್ತಿರುವುದು ಖುಷಿಯ ವಿಷಯ. ಈಗಾಗಲೇ ನಡೆದಿರುವ ಸಿದ್ಧತಾ ಸಭೆಗಳಲ್ಲಿ ಪಾಲ್ಗೊಂಡು ಅಗತ್ಯ ಸಲಹೆಗಳನ್ನು ನೀಡಲಾಗಿದೆ. ಕೊಡಗಿನಲ್ಲಿ ಆಯೋಜಿಸಲಾಗಿರುವ ಈ ಪಂದ್ಯಾವಳಿ ಯಶಸ್ಸು ಮಾಡುವುದು ನಮ್ಮೆಲ್ಲರ ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಎಲ್ಲಾ ಸಹಕಾರ ನೀಡಲಾಗುವುದು.
ವಿ.ಎಸ್. ಆನಂದಕುಮಾರ್, ಅಧ್ಯಕ್ಷ, ಗೆಳೆಯರ ಬಳಗ, ಕುಶಾಲನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net