

ಮಡಿಕೇರಿ: ಅಕ್ರಮವಾಗಿ ಜಿಂಕೆ ಚರ್ಮ ಮಾರಾಟ ಮಾಡಲು ಪ್ರಯತ್ನಿಸಿದ್ದ ಆರೋಪದ ಮೇಲೆ ಅಲೀಮ್ ಪಾಷಾ ಎಂಬಾತನನ್ನು ಮಡಿಕೇರಿ ಅರಣ್ಯ ಸಂಚಾರಿದಳದವರು ಸೋಮವಾರ ಬಂಧಿಸಿದ್ದಾರೆ.
ಗುಡ್ಡೆಹೊಸೂರಿನಿಂದ ಸಿದ್ದಾಪುರ ಕಡೆಗೆ ಹೋಗುವ ರಸ್ತೆ ಬಳಿ ಅಕ್ರಮವಾಗಿ ೩ ಜಿಂಕೆ ಚರ್ಮ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಡಿಕೇರಿ ಅರಣ್ಯ ಸಂಚಾರಿ ದಳದ ಸಬ್‌ಇನ್ಸ್‌ಪೆಕ್ಟರ್ ಸಿ.ಯು. ಸವಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮುಖ್ಯಪೇದೆಗಳಾದ ಶೇಖರ್, ರಾಜೇಶ್, ರಾಘವೇಂಧ್ರ, ಯೋಗೇಶ್, ಮೋಹನ್, ಪೇದೆ ಮಂಜುನಾಥ್ ಪಾಲ್ಗೊಂಡಿದ್ದರು.