ನೆಲ್ಲಿತ್ತಾಯ ಮುಡಿಯೇರಿದ ಸಿಜಿಕೆ ರಂಗ ಪ್ರಶಸ್ತಿ

27 gkp 03
Published on

ಸಿ.ಜಿ. ಕೃಷ್ಣಮೂರ್ತಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ

ಪೊನ್ನಂಪೇಟೆ: ಕರ್ನಾಟಕ ರಂಗ ಪರಿಷತ್ತು, ಕರ್ನಾಟಕ ಬೀದಿ ನಾಟಕ ಅಕಾಡೆಮಿ ಹಾಗೂ ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆ ಸಹಯೋಗದಲ್ಲಿ ಶ್ರೀಧರ್ ನೆಲ್ಲಿತ್ತಾಯ ಅವರಿಗೆ ಸಿಜಿಕೆ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪೊನ್ನಂಪೇಟೆ ಕಾವೇರಿ ಕೊಡವ ಕೂಟ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಿ.ಜಿ.ಕೃಷ್ಣಮೂರ್ತಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು. ಬೀದಿ ನಾಟಕ ಅಕಾಡೆಮಿ ಕೊಡಗು ಸಂಚಾಲಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಸಿಜಿಕೆ ಕಲಾವಿದರಾಗಿ ಸಾಕಷ್ಟು ಕೊಡುಗೆ ನೀಡಿದವರು. ಇವರ ಹೆಸರಿನಲ್ಲಿ ಇಂದು ಜಿಲ್ಲಾ ವ್ಯಾಪ್ತಿಯಲ್ಲಿ ಹಿರಿಯ ಕಲಾವಿದರಿಗೆ ಪ್ರಶಸ್ತಿ ಪ್ರದಾನ ನಡೆಯುತ್ತಿದೆ. ಇದರಂತೆ ಕಲಾವಿದ ಶ್ರೀಧರ್ ನೆಲ್ಲಿತ್ತಾಯ ಕಲಾ ತಂಡಕ್ಕೆ ನೀಡಿದ ಪ್ರೋತ್ಸಾಹ ಅರಿತು ಗೌರವಿಸಲಾಗುತ್ತಿದೆ ಎಂದರು.
ಹಿರಿಯ ಕಲಾವಿದ ಎಸ್.ಎಲ್.ಶಿವಣ್ಣ, ಕಾವೇರಿ ಕೊಡವ ಕೂಟ ಹಿರಿಯ ಸದಸ್ಯೆ ಬಲ್ಯಮಂಡ ದೇವಕ್ಕಿ, ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆ ಉಪಾಧ್ಯಕ್ಷ ಚೆಪ್ಪುಡೀರ ಕೆ. ಸೋಮಯ್ಯ, ಕಲಾವಿದೆ ಅಡ್ಡಂಡ ಅನಿತಾ ಕಾರ್ಯಪ್ಪ, ಹಿರಿಯ ಕಲಾವಿದ ಎಸ್.ಎಲ್. ಶಿವಣ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net