ಕೊಡಗಿನ ೧೬ ಪತ್ರಕರ್ತರಿಗೆ ೧೮ ಪ್ರಶಸ್ತಿ ಪ್ರದಾನ

22mdka2 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ೧೬ ಪತ್ರಕರ್ತರಿಗೆ ೧೮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಡಿಕೇರಿಯಲ್ಲಿರುವ ಪತ್ರಿಕಾ ಭವನದಲ್ಲಿ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಪತ್ರಕರ್ತರಾದ ಕಿಶೋರ್ ಶೆಟ್ಟಿ, ಕೆ.ಎಂ. ಇಸ್ಮಾಯಿಲ್, ನವೀನ್ ಸುವರ್ಣ, ರಘು ಹೆಬ್ಬಾಲೆ, ಸಣ್ಣುವಂಡ ಕಿಶೋರ್ ನಾಚಪ್ಪ , ಹಿರಿಕರ ರವಿ, ಪಿ.ವಿ. ಅಕ್ಷಯ್, ಎಚ್.ಕೆ. ಜಗದೀಶ್, ರೆಜಿತ್‌ಕುಮಾರ್ ಗುಹ್ಯ, ಚಂದನ್ ನಂದರಬೆಟ್ಟು, ಸಂತೋಷ್ ರೈ, ಬಾಚರಣಿಯಂಡ ಅನು ಕಾರ್ಯಪ್ಪ, ಸುರೇಶ್ ಬಸವೇಗೌಡ, ಜಗದೀಶ್ ಜೋಡುಬೀಟಿ, ಪಳೆಯಂಡ ಪಾರ್ಥ ಚಿಣ್ಣಪ್ಪ, ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಶಸ್ತಿ ಸ್ವೀಕರಿಸಿದರು.

ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮುಖ್ಯಭಾಷಣ ಮಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಉದ್ಘಾಟಿಸಿದರು. ಪ್ರಜಾವಾಣಿ ಜಿಲ್ಲಾ ವರದಿಗಾರರಾಗಿದ್ದ ಕೆ.ಎ. ಆದಿತ್ಯ ಅವರಿಗೆ ಬೀಳ್ಕೊಡುಗೆ ನೀಡಲಾ ಯಿತು.

ವೇದಿಕೆಯಲ್ಲಿ ಭಾರತೀಯ ಪತ್ರಕರ್ತರ ಒಕ್ಕೂಟ ಸದಸ್ಯ ಸುನಿಲ್ ಪೊನ್ನೇಟಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ.ಎನ್. ಚಂದ್ರಮೋಹನ್ (ಕುಶಾಲನಗರ), ವಿಜಯ ಹಾನಗಲ್ (ಸೋಮವಾರಪೇಟೆ), ಕೆ.ಕೆ. ರೆಜಿತ್‌ಕುಮಾರ್ ಗುಹ್ಯ (ವಿರಾಜಪೇಟೆ), ಸಣ್ಣುವಂಡ ಕಿಶೋರ್ ನಾಚಪ್ಪ (ಪೊನ್ನಂಪೇಟೆ) ಇದ್ದರು.

ಬಾಚರಣಿಯಂಡ ಅನು ಕಾರ್ಯಪ್ಪ ಸ್ವಾಗತಿಸಿದರು. ಗಣೇಶ್ ಕುಡೆಕಲ್ಲು ಪ್ರಾರ್ಥಿಸಿದರು. ಆನಂದ್ ಕೊಡಗು ನಿರೂಪಿಸಿದರು. ಪಳೆಯಂಡ ಪಾರ್ಥ ಚಿಣ್ಣಪ್ಪ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net