

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕಂದಾಯ ಇಲಾಖೆಯಲ್ಲಿ ಬಾಣೆ ಜಾಗಕ್ಕೆ ಕಂದಾಯ ನಿಗದಿ ಪಡಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ಆಕ್ರೋಶ ಬೆಳೆಗಾರರಲ್ಲಿದೆ. ವರ್ಷಗಟ್ಟಲೆ ಕಳೆದರೂ ತಮ್ಮ ಅರ್ಜಿ ವಿಲೇವಾರಿ ಆಗುತ್ತಿಲ್ಲ ಎಂದು ಕಂದಾಯ ಇಲಾಖೆ ಕಾರ್ಯವೈಖರಿಗೆ ಕಿಡಿಕಾರುತ್ತಾರೆ. ಇದೀಗ ಕಡತ ವಿಲೇವಾರಿಗೆ ಕಾಲಾವಧಿ ನಿಗದಿ ಪಡಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ ೧೯೬೪ ಕಲಂ ೮೦ ಕ್ಕೆ ತಿದ್ದುಪಡಿಯಾದಂತೆ ಕೊಡಗು ಜಿಲ್ಲೆಯಲ್ಲಿನ ಬಾಣೆ ಜಮೀನುಗಳಿಗೆ ಕಂದಾಯ ನಿಗದಿ ಮಾಡಲಾಗುತ್ತಿದೆ. ಪ್ರಸ್ತುತ ಕಂದಾಯ ನಿಗದಿ ಮಾಡಲು ಸಾರ್ವಜನಿಕರು ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ನೀಡುತ್ತಾರೆ. ಈ ಅರ್ಜಿಗಳನ್ನು ತಹಸೀಲ್ದಾರ್ ಕಚೇರಿಯಿಂದ ನಾಡ ಕಚೇರಿಗಳಿಗೆ ಕಳುಹಿಸಲಾಗುತ್ತಿದೆ.
ಆಯಾ ಹೋಬಳಿಗಳ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಪರಿವೀಕ್ಷಕರು ಸ್ಥಳ ಪರಿಶೀಲನೆ ಮಾಡಿ, ಚೆಕ್ ತಯಾರಿಸಿ, ತಹಸೀಲ್ದಾರ್ ಕಚೇರಿಗೆ ಕಡತ ಕಳುಹಿಸುತ್ತಾರೆ. ತದನಂತರ ತಹಸೀಲ್ದಾರ್ ಕಚೇರಿಯಿಂದ ಕಡತವನ್ನು ಸರ್ವೇ ಶಾಖೆಗೆ ಕಳುಹಿಸಲಾಗುತ್ತಿದೆ. ಭೂಮಾಪಕರು ಅಳತೆ ಮಾಡಿ, ಪ್ರತಿ ಪುಸ್ತಕ, ಟಿಪ್ಪಣಿ, ಕಂದಾಯ ತಃಖ್ತೆ, ಪಿಟಿ ಶೀಟ್ ಹಾಗೂ ಚೆಕ್ ಲಿಸ್ಟ್ ತಯಾರಿಸಿ ಪರ್ಯಾವೇಕ್ಷಕರ ಅನುಮೋದನೆ ಪಡೆದು ಭೂದಾಖಲೆಗಳ ಸಹಾಯಕ ನಿರ್ದೇಶಕರ ಅನುಮೋದನೆ ನಂತರ ತಹಸೀಲ್ದಾರ್ ಕಚೇರಿಯ ಎಂಸಿ ಶಾಖೆಗೆ ಕಳುಹಿಸಲಾಗುತ್ತಿತ್ತು. ಬೆಳೆಯ ಬಗ್ಗೆ ತಹಸೀಲ್ದಾರ್ ಸ್ಥಳ ತನಿಖೆ ಮಾಡಿ, ಕಂದಾಯ ಅನುಮೋದನೆಗೆ ಉಪವಿಭಾಗಾಧಿಕಾರಿಗೆ ಕಳುಹಿಸುತಿ
್ತದ್ದರು.
ಅಧಿಕ ವಿಸ್ತೀರ್ಣವಿದ್ದಲ್ಲಿ ಉಪವಿಭಾಗಾಧಿಕಾರಿ ಸ್ಥಳ ತನಿಖೆ ಮಾಡಿ, ಕಂದಾಯ ನಿಗದ ಮಾಡಿ ಆದೇಶ ಹೊರಡಿಸಿದ ನಂತರ ತಹಸೀಲ್ದಾರ್ ಕಚೇರಿಗೆ ಕಳುಹಿಸಲಾಗುತ್ತಿದೆ. ತದನಂತರ ಕಡತವನ್ನು ಹಿಂದಳ ಕಂದಾಯ ವಸೂಲಾತಿಗಾಗಿ ನಾಡಕಚೇರಿಗೆ ಕಳುಹಿಸಲಾಗುತ್ತದೆ. ಕಂದಾಯ ಪಾವತಿಸಿದ ನಂತರ ಆಕಾರ್ ಬಂದ್ ದುರಸ್ತಿಗೆ ತಹಸೀಲ್ದಾರ್ ಕಚೇರಿಯಿಂದ ಭೂದಾಖಲೆಗಳ ಉಪನಿರ್ದೇಶಕರ ಕಚೇರಿಗೆ ಕಳುಹಿಸಿ, ಭೂ ದಾಖಲೆಗಳ ಉಪನಿರ್ದೇಶಕರ ಸಹಿ ನಂತರ ಅಂತಿಮವಾಗಿ ಭೂಮಿಶಾನೆಗೆ ಆರ್‌ಟಿಸಿ ಇಂಡೀಕರಣಕ್ಕಾಗಿ ಕಳುಹಿಸಲಾಗು ತ್ತದೆ.
ಇನ್ಮುಂದೆ ೩೦ ದಿನದಲ್ಲಿ ದಾಖಲೆ
ಜಿಲ್ಲಾಧಿಕಾರಿ ಪ್ರಸ್ತುತ ಹೊರಡಿಸಿರುವ ಆದೇಶ ಚಾಚೂ ತಪ್ಪದೇ ಜಾರಿಗೆ ಬಂದಲ್ಲಿ ಅರ್ಜಿ ಸಲ್ಲಿಸಿದ್ದ ದಿನದಲ್ಲಿ ಬಾಣೆ ಜಾಗಕ್ಕೆ ಕಂದಾಯ ನಿಗದಿ ಪಡಿಸಲಾಗುತ್ತದೆ. ಇದು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ ಎಂಬ ಕುತೂಹಲ ಮೂಡಿದೆ. ಅ.೨೫ ರಂದು ಹೊರಡಿಸಿರುವ ಆದೇಶ ಭೂದಾಖಲೆ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡುವಂತಿದೆ.
ತಹಸೀಲ್ದಾರ್ ಕಚೇರಿಯಲ್ಲಿ ದ್ವಿಪ್ರತಿಯಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸ್ವೀಕರಿಸಲಾಗುತ್ತದೆ. ಸ್ವೀಕರಿಸಿದ ಅರ್ಜಿಗಳನ್ನು ಪ್ರತ್ಯೇಕ ವಹಿಯಲ್ಲಿ ನಿರ್ವಹಿಸಿ, ಸಂಬಂಧಿಸಿದ ಕಂದಾಯ ಪರಿವೀಕ್ಷಕರು ಹಾಗೂ ಸರ್ವೇ ಶಾಖೆಗೆ ೩ ದಿನದಲ್ಲಿ ಕಳುಹಿಸಬೇಕು.
ಕಂದಾಯ ಪರಿವೀಕ್ಷಕರು ಭೂಮಾಪಕರೊಂದಿಗೆ ಸ್ಥಳ ಪರಿಶೀಲಿಸಿ, ಹೇಳಿಕೆ ಮಹಜರು, ಸ್ಪಷ್ಟ ವರದಿಯೊಂದಿಗೆ ತಹಸೀಲ್ದಾರ್ ಕಚೇರಿಗೆ ವರದಿ ಸಲ್ಲಿಸಬೇಕು.ಭೂಮಾಪಕರು ಸರ್ವೇ ಮಾಡಿ, ನೆಲ ಪ್ರತಿ, ಪಿಟಿ ಶೀಟ್, ಕಂದಾಯ ತಃಖ್ತೆಯೊಂದಿಗೆ ಪರ್ಯಾವೇಕ್ಷಕರ ಸಹಿ ಹಾಗೂ ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ ಸಹಿಯೊಂದಿಗೆ ತಹಸೀಲ್ದಾರ್ ಕಚೇರಿಗೆ ೯ ದಿನದಲ್ಲಿ ಕಳುಹಿಸಬೇಕು.
ಕಂದಾಯ ದರ ಅನುಮೋದಗೆ ಉಪವಿಭಾಗಾಧಿಕಾರಿಗೆ ತಹಸೀಲ್ದಾರ್ ೪ ದಿನದಲ್ಲಿ ಕಡತ ಸಲ್ಲಿಸಬೇಕು. ಕಂದಾಯ ದರ ನಿಗದಿ ಪಡಿಸಿ, ಸರ್ವೇ ಶಾಖೆಗೆ ದುರಸ್ತಿ ಕಾರ್ಯಕ್ಕೆ ಉಪವಿಭಾಗಾಧಿಕಾರಿ ೪ ದಿನದಲ್ಲಿ ಕಡತ ಕಳುಹಿಸಬೇಕು. ಸರ್ವೇ ಶಾಖೆಯಲ್ಲಿ ದುರಸ್ತಿ ಕ್ರಮ ಕೈಗೊಂಡು ಭೂದಾಖಲೆಗಳ ಉಪನಿರ್ದೇಶಕರ ಸಹಿತಯೊಂದಿಗೆ ಆಕಾರ್ ಬಂದ್ ಪ್ರತಿಯೊಂದಿಗೆ ತಾಲೂಕು ಕಚೇರಿಗೆ ೫ ದಿನದಲ್ಲಿ ಕಳುಹಿಸಬೇಕು.
ತಾಲೂಕು ಕಚೇರಿ ಭೂಮಿ ಶಾಖೆಯಲ್ಲಿ ಹಿಂದಳ ಬಾಕಿ ಸಂಗ್ರಹಿಸಿ, ಪಹಣಿಯಲ್ಲಿ ಕಂದಾಯ ದಾಖಲೆ ಮಾಡಲು ೫ ದಿನದೊಳಗೆ ಕ್ರಮ ತೆಗೆದುಕೊಳ್ಳಬೇಕು.
**
ಕಂದಾಯ ನಿಗದಿ ಪ್ರಕರಣಗಳಲ್ಲಿ ಅನುಸರಿಸುತ್ತಿರುವ ಕ್ರಮದಲ್ಲಿ ಕೆಲವೊಂದು ಅನಗತ್ಯ ಅಂಶಗಳಿದೆ. ಕಂದಾಯ ನಿಗದಿಗೆ ಇಂತಿಷ್ಟೇ ಕಾಲಾವಧಿ ನಿಗದಿ ಪಡಿಸದೇ ಇರುವುದರಿಂದ ಹಲವು ಪ್ರಕರಣಗಳಲ್ಲಿ ಕಡತ ವಿಲೇವಾಗಿ ವಿಳಂಬವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ಕಂದಾಯ ನಿಗದಿಗಾಗಿ ಸ್ವೀಕಾರಗೊಳ್ಳುವ ರ್ಅಗಳನ್ನು ಸಮರ್ಪಕವಾಗಿ, ತ್ವರಿತವಾಗಿ ವಿಲೇವಾರಿ ಮಾಡಲು ಮಾರ್ಗ ಸೂಚಿ ಹೊರಡಿಸಲಾಗಿದೆ. ಡಾ.ಬಿ.ಸಿ. ಸತೀಶ, ಕೊಡಗು ಜಿಲ್ಲಾಧಿಕಾರಿ.