ಕುಸಿಯುವ ಆತಂಕದಲ್ಲಿ ಕೊಡಗು ಜಿಲ್ಲಾಧಿಕಾರಿ ಭವನ ಎದುರಿನ ತಡೆಗೋಡೆ

18mdkj6
Published on

ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಭವನ ಎದುರು ೭ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ತಡೆಗೋಡೆ ಕುಸಿಯಲಾರಂಭಿಸಿ ರುವುದು ಆತಂಕ ಸೃಷ್ಟಿಸಿದೆ. ಮುಂಗಾರು ಮಳೆ ಅಬ್ಬರಕ್ಕೆ ತಡೆಗೋಡೆಯಲ್ಲಿ ಉಬ್ಬು ಕಾಣಿಸಿಕೊಂಡಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಕುಸಿಯ ಬಹುದೆಂಬ ಸ್ಥಿತಿಯಲ್ಲಿದೆ.

ಮಳೆಗಾಲ ಪ್ರಾರಂಭಕ್ಕೆ ಮುನ್ನ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಅನಾಹುತ ಎದುರಾಗಿದೆ. ರಿಎನ್‌ಫೋರ್ಸ್‌ಮೆಂಟ್ ಪ್ಯಾನಲ್ ವಾಲ್ (ಆರ್.ಇ. ವಾಲ್) ಕಾಮಗಾರಿ ಶೇ.೭೫ ರಷ್ಟು ಪೂರ್ಣಗೊಂಡಿದೆ. ಕಾಂಕ್ರಿಟ್ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ಸಕಾಲದಲ್ಲಿ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ
ಇಂಜಿನಿಯರ್ ನಾಗರಾಜು ಅಸಹಾಯಕತೆ ವ್ಯಕ್ತ ಪಡಿಸುತ್ತಿದ್ದಾರೆ.

ತಡೆಗೋಡೆ ಉತ್ಕೃಷ್ಟ ಮಟ್ಟದಲ್ಲಿದೆ. ಕಾಂಕ್ರಿಟ್ ಸ್ಲಾೃಬ್‌ಗಳನ್ನು ಮೂರು ಹಂತದಲ್ಲಿ ಬಲ ಪಡಿಸಿ ನಿರ್ಮಿಸಲಾಗಿದೆ. ಟ್ಯಾಗ್ ಮಾಡಿ ಸ್ಟೀಲ್ ನೈಲ್, ಮೆಸ್‌ಗಳನ್ನು ಒಳಭಾಗದಲ್ಲಿ ಅಳವಡಿಸಲಾಗಿದೆ. ಯಾವುದಾದರೂ ಪ್ಯಾನಲ್ ಸ್ಥಾನ ಪಲ್ಲಟಗೊಂಡರೆ ಆ ಪ್ಯಾನಲ್ ಮಾತ್ರ ಹೊರ ಬರುತ್ತದೆ ಹೊರತು ಇಡೀ ಗೋಡೆಗೆ ಸಮಸ್ಯೆ ಉಂಟಾಗುವುದಿಲ್ಲ. ತಡೆಗೋಡೆಯ ತುದಿಭಾಗದಲ್ಲಿ ಮಾತ್ರ ಸಮಸ್ಯೆಯಾಗಿದೆ ಎಂದು ಹೊರು ಮಧ್ಯ ಭಾಗದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎನ್ನುತ್ತಾರೆ.

ತಡೆಗೋಡೆ ಕುಸಿಯುವ ಆತಂಕ ಇರುವುದರಿಂದ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಮಡಿಕೇರಿ- ಮೇಕೇರಿ- ತಾಳತ್ತಮನೆ ಮೂಲಕ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net