ಕೊಡಗು ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಜಿಲ್ಲೆಯೆಂದು ಘೋಷಿಸಲು ಆಗ್ರಹ

TATU MONNAPPA
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುಂದ ಫಸಲು ನಷ್ಟವಾಗಿದೆ. ಸರ್ಕಾರ ಕೊಡಗನ್ನು ಅತಿವೃಷ್ಟಿ ಪೀಡಿತ ಜಿಲ್ಲೆಯೆಂದು ಘೋಷಿಸಿ ಬೆಳೆಗಾರರಿಗೆ ಸೂಕ್ತ ಪರಿಹಾರ‌್ನ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ಒತ್ತಾಯಿಸಿದ್ದಾರೆ.

ಕಾಫಿ ಮಂಡಳಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಬೆಳೆ ನಷ್ಟ ಸಮೀಕ್ಷೆ ನಡೆಸುತ್ತಿದೆ. ಆದರೆ ಬಹುತೇಕ ಗ್ರಾಮಗಳಿಗೆ ಇವರು ಭೇಟಿ ನೀಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಜಿಲ್ಲೆಯ ಎಲ್ಲಾ ಗ್ರಾಮಗಳನ್ನು ಪರಿಹಾರಕ್ಕೆ ಪರಿಗಣಿಸ ಬೇಕು. ಇಲ್ಲದಿದ್ದಲ್ಲಿ ಕಾಫಿ ಮಂಡಳಿ, ತೋಟಗಾರಿಕೆ- ಕೃಷಿ ಇಲಾಖೆ ಕಚೇರಿ, ಜಿಲ್ಲಾಧಿಕಾರಿ ಹಾಗೂ ಶಾಸಕರ ಕಚೇರಿ ಎದುರು ನಿರಂತರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಅತಿವೃಷ್ಟಿಯಿಂದ ಬೆಳೆಗಾರರಿಗೆ ನಿರಂತರ ನಷ್ಟವಾಗಿದ್ದರೂ ಶಾಸಕರು ಬೆಳೆಗಾರರ ಪರವಾಗಿ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲರಾಗಿ ದ್ದಾರೆ. ಸಂಸದ ಪ್ರತಾಪ್ ಸಿಂಹ ಅತಿವೃಷ್ಟಿಗೆ ತುತ್ತಾದ ಜಿಲ್ಲೆಗೆ ಒಂದು ಬಾರಿಯೂ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಆರೋಪಿಸಿದ್ದಾರೆ.

ಜಿಲ್ಲೆಯ ಎಲ್ಲಾ ಬೆಳೆಗಾರರಿಗೆ ಪರಿಹಾರ ನೀಡಲು ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಸಂಬಂಧಿಸಿದ ಇಲಾಖೆಗಳಿಗೆ ಸರ್ಕಾರ ಕಡಿಮೆ ಗ್ರಾಮಗಳನ್ನು ಮಾತ್ರ ಬೆಳೆ ನಷ್ಟ ಪರಿಹಾರ ಪಟ್ಟಿಗೆ ಸೇರಿಸಿ ನಾಮ್‌ಕಾವಸ್ಥೆಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಇದರಿಂದ ನಷ್ಟ್ಟಕ್ಕೊಳ ಗಾಗಿರುವ ಬಹಳಷ್ಟು ಗ್ರಾಮ ಕೈಬಿಡುವ ಸಾಧ್ಯತೆ ಇದ್ದು, ಕೃಷಿಕ ವರ್ಗದ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯ ಧೋರಣೆಗೆ ಇದು ಸಾಕ್ಷಿಯಾಗಿದೆ. ಶಾಸಕರು ಹಾಗೂ ಸಂಸದರು ಕೊಡಗಿನ ಬೆಳೆಗಾರರ ಬವಣೆ ಸರ್ಕಾರಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾ ರೆಂದು ಟೀಕಿಸಿದ್ದಾರೆ.

ರೈತರಿಗೆ ನೀಡಲು ಸರ್ಕಾರದ ಬಳಿ ಹಣವಿಲ್ಲ. ಕಳಪೆ ಕಾಮಗಾರಿಯ ತಡೆಗೋಡೆಗೆ ಕೋಟಿ ಕೋಟಿ ಹಣ ಸುರಿಯುವ ಶಾಸಕರು ಕೃಷಿಕರ ಬಗ್ಗೆ ಯಾಕೆ ನಿರಾಸಕ್ತಿ ತೋರುತ್ತಿದ್ದಾರೆ. ಬೆಳೆ ಪರಿಹಾರದಲ್ಲಿ ಯಾವುದೇ ಕಮಿಷನ್ ಲಭ್ಯವಿಲ್ಲ ಎನ್ನುವ ಕಾರಣಕ್ಕಾಗಿಯೇ ಎಂದು ಪ್ರಶ್ನಿಸಿ ದ್ದಾರೆ.

ಜಿಲ್ಲೆಯಲ್ಲಿ ರಸಗೊಬ್ಬರಗಳ ಕೊರತೆ ಉಂಟಾಗಿದೆ, ಜಿಲ್ಲೆಯಾದ್ಯಂತ ಉತ್ತಮ ಗುಣಮಟ್ಟದ ರಸ ಗೊಬ್ಬರಗಳು ಲಭ್ಯವಿಲ್ಲ. ಸಕಾಲದಲ್ಲಿ ರಸಗೊಬ್ಬರ ದೊರೆಯದೆ ಬೆಳೆಗೆ ಹಾನಿಯಾಗಿ ನಷ್ಟ ಅನುಭಸುವಂತ್ತಾಗಿದೆ. ವನ್ಯಜೀವಿ- ಮಾನವ ಸಂಘರ್ಷ ಮಿತಿಮೀರಿದೆ. ಕಾರ್ಮಿಕ ರು, ಬೆಳೆಗಾರರು ಕಾಡುಪ್ರಾಣಿಗಳ ದಾಳಿಗೆ ಬಲಿಯಾಗುತ್ತಿದ್ದಾರೆ. ಆದರೆ ೪-೫ ಅವಧಿಯಿಂದ ಶಾಸಕರಾಗಿ ಅಧಿಕಾರ ಅನುಭವಿಸಿರುವ ಶಾಸಕರು ಶಾಶ್ವತ ಪರಿಹಾರ ರೂಪಿಸಲು ವಿಫಲರಾಗಿದ್ದಾರೆಂದು ಟೀಕಿಸಿದ್ದಾರೆ.

ಜಿಲ್ಲೆಯ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದೆ. ಹೊಂಡ, ಗುಂಡಿಗಳಲ್ಲಿ ರಸ್ತೆ ಹುಡುಕುವಂತ್ತಾಗಿದೆ. ರಸ್ತೆ ಅಭಿವೃದ್ಧಿ ನೆಪದಲ್ಲಿ ಅನುದಾನ ದುರುಪಯೋಗವಾಗುತ್ತಿದ್ದು, ಕಳಪೆ ಕಾಮಗಾರಿಯಿಂದಾಗಿ ೬- ೭ ತಿಂಗಳುಗಳಲ್ಲೇ ರಸ್ತೆಗಳಲ್ಲಿ ಗುಂಡಿಗಳು ಗೋಚರಿಸುತ್ತಿವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ಆಡಳಿತ ಪಕ್ಷದ ಶಾಸಕರು ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net