

ಸಿದ್ದಾಪುರ: ಕೊಡಗು ಚಾಂಪಿಯನ್ಸ್ ಲೀಗ್ ಐದನೇ ಆವೃತ್ತಿಯ ಪಂದ್ಯಾಟದ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನೆಲ್ಯಹುದಿಕೇರಿಯ ಕೋಫಿಯ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನೆಲ್ಯಹುದಿಕೇರಿ ಗ್ರಾ.ಪಂ ಅಧ್ಯಕ್ಷ ಸಾಬು ವರ್ಗೀಸ್, ಕೆ.ಸಿ.ಎಲ್ ಪಂದ್ಯಾವಳಿ ಹಾಗೂ ಬಿಡ್ಡಿಂಗ್ ಪ್ರಕ್ರಿಯೆ ಐ.ಪಿ.ಎಲ್ ನ ಗುಣಮಟ್ಟದಲ್ಲಿ ಮಾಡುತ್ತಿರುವುದು ಶ್ಲಾಘನೀಯ. ಕೆ.ಸಿ.ಎಲ್ ನಿಂದಾಗಿ ಜಿಲ್ಲೆಯ ವಿವಿಧ ಭಾಗದ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತಾಗಿದೆ ಎಂದರು.
ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್ ಮಾತನಾಡಿ, ಕೆ.ಸಿ.ಎಲ್ ಐದನೇ ಪಂದ್ಯಾವಳಿಯೂ ಅದ್ಧೂರಿಯಿಂದ ನಡೆಯುತ್ತಿದ್ದು, ಬಿಡ್ಡಿಂಗ್ ಕೂಡ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಮೈದಾನದ ಅಗತ್ಯವಿದ್ದು, ಈ ಬಗ್ಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಬೇಕು ಎಂದರು.
ಸಿದ್ದಾಪುರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ನೆಲ್ಯಹುದಿಕೇರಿ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್, ಕೊಫಿಯ ಮಾಲೀಕರಾದ ಶಿಯಾಬ್, ಸಲೀಂ ಮಾತನಾಡಿ ಶುಭ ಹಾರೈಸಿದರು.
ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಐಕಾನ್ ಆಟಗಾರರ ಬಿಡ್ಡಿಂಗ್ ಹಾಗೂ ಆಟಗಾರರ ಬಿಡ್ಡಿಂಗ್ ನಡೆಯಿತು. ಜಿಲ್ಲೆಯ ಸುಮಾರು ೨೦೦ ಕ್ಕೂ ಅಧಿಕ ಆಟಗಾರರು ಬಿಡ್ಡಿಂಗ್‌ಗಾಗಿ ಅರ್ಜಿ ಸಲ್ಲಿಸಿದ್ದರು.
ಎ ಪೂಲ್: ರಾಂಬೋ ಕ್ರಿಕೆಟರ್ಸ್ ನೆಲ್ಯಹುದಿಕೇರಿ, ಟೀಂ ಕೊಂಬನ್ ಗುಹ್ಯ, ರೋಯಲ್ಸ್ ವಿರಾಜಪೇಟೆ, ರೆಡ್ ಬ್ಯಾಕ್ ಮಡಿಕೇರಿ, ಕ್ರಿಯೇಟಿವ್ ಕ್ರಿಕೆಟರ್ಸ್ ಮಡಿಕೇರಿ, ಫ್ರೆಂಡ್ಸ್ ಕ್ರಿಕೆಟರ್ಸ್ ಸಿದ್ದಾಪುರ.
ಬಿ ಪೂಲ್: ನ್ಯೂ ಕೂರ್ಗ್ ಸ್ಟಾರ್ ನಲ್ವತ್ತೇಕರೆ, ಸ್ಪೋರ್ಟ್ಸ್ ವಾರ್ಲ್ಡ್ ಮಡಿಕೇರಿ, ಕ್ಲಬ್ ವೈ.ಬಿ.ಸಿ ನೆಲ್ಯಹುದಿಕೇರಿ, ಎ.ಕೆ ಫ್ರೆಂಡ್ಸ್ ಹುಂಡಿ, ಡಾಟ್ ಡಾಮಿನೇಟರ್ಸ್ ದುಬಾರೆ, ಟೀಂ ಕೂಲ್ ಸಿದ್ದಾಪುರ ತಂಡಗಳು ಭಾಗವಹಿಸುತ್ತಿವೆ.