ಚಾಲಕನಿಗೆ ಲೋ ಬಿಪಿ; ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು..!

Car
Published on

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಲೈನ್​ ಮನೆಗೆ ಡಿಕ್ಕಿಯಾಗಿರುವ ಘಟನೆ ಕೊಡಗಿನ ಸೋಮವಾರಪೇಟೆಯಲ್ಲಿ ನಡೆದಿದೆ.

ಇಂದು ಬೆಳಗ್ಗೆ ತಾಕೇರಿಯಿಂದ ಸೋಮವಾರಪೇಟೆ ಹೋಗುವಾಗ ಮಾರ್ಗ ಮಧ್ಯೆ ದುರ್ಘಟನೆ ನಡೆದಿದ್ದು, ಪ್ರಾಣಪಾಯದಿಂದ ಚಾಲಕ ಬೋಪಯ್ಯ (47) ಪಾರಾಗಿದ್ದಾರೆ.

ಚಾಲಕನಿಗೆ ಲೋ ಬಿಪಿ ಹಿನ್ನಲೆಯಲ್ಲಿ ಮಾರುತಿ ಬ್ರಿಝಾ ಕಾರು ನಿಯಂತ್ರಣ ತಪ್ಪಿ ಮನೆಗೆ ಡಿಕ್ಕಿಯಾಗಿದೆ. ಸೋಮವಾರಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net