

ಮಡಿಕೇರಿ:
ಈ ಹಿಂದಿನ ಬಜೆಟ್‌ಗಳಿಗೆ ಹೋಲಿಸಿದರೆ ಶುಕ್ರವಾರ ಮಂಡನೆ ಆದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೊಡಗಿಗೆ ದೊಡ್ಡ ಮಟ್ಟದ ಆದ್ಯತೆ ಸಿಕ್ಕಿದಂತಿದೆ. ಅದರಲ್ಲೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ತಮ್ಮ ಪ್ರಭಾವವನ್ನು ಸಕಾರಾತ್ಮಕವಾಗಿ ಬಳಸಿಕೊಂಡಿರುವAತೆ ಕಂಡುಬAದಿದ್ದು, ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 400 ಹಾಸಿಗೆಗಳ ದೊಡ್ಡ ಆಸ್ಪತ್ರೆ ತರುವಲ್ಲಿ ಯಶಸ್ವಿ ಆಗಿದ್ದಾರೆ. ಆದರೆ ಪ್ರಮುಖವಾಗಿ ಪ್ರವಾಸೋದ್ಯಮಕ್ಕೆ ಸಂಬAಧಿಸಿದAತೆ ಕೊಡಗಿಗೆ ಯಾವುದೇ ಯೋಜನೆಗಳ ಪ್ರಸ್ತಾಪ ಇದ್ದಂತಿಲ್ಲ.
ಕೊಡಗು ವಿವಿ ಮುಚ್ಚುವುದು ಅಥವಾ ವಿಲೀನಗೊಳಿಸುವುದಕ್ಕೆ ಸಂಬAಧಿಸಿದAತೆ ತೂಗು ಕತ್ತಿ ನೇತಾಡುತ್ತಿರುವ ಸಂದರ್ಭದಲ್ಲಿ ಈ ಬಜೆಟ್ ಮೇಲೆ ಜಿಲ್ಲೆಯ ಜನತೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿತ್ತು. ವಿವಿ ಉಳಿಸುವುದಕ್ಕಾಗಿ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆಯುತ್ತಿದ್ದು, ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ ಕೊಡಬಹುದು ಎಂದು ಕೊಡಗಿನ ವಿದ್ಯಾಭಿಮಾನಿಗಳು ಕಾಯುತ್ತಿದ್ದರು. ಆದರೆ ಕೊಡಗು ವಿವಿ ಸೇರಿದಂತೆ ಇತರ ಯಾವುದೇ ವಿಶ್ವವಿದ್ಯಾಲಯಗಳ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲದಿರುವುದು ನಿರಾಸೆ ಮೂಡಿಸಿದೆ.
ಕೊಡಗಿನಲ್ಲಿ ಕಾಫಿ ಪ್ರಮುಖ ವಾಣಿಜ್ಯ ಬೆಳೆ. ಸದ್ಯಕ್ಕೇನೋ ಕಾಫಿಗೆ ಉತ್ತಮ ಬೆಲೆ ಇದೆ. ಆದರೆ ಫಸಲು ಅಷ್ಟಾಗಿ ಇಲ್ಲ. ಬೆಳೆಗಾರ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾನೆ. ಬೇರೆ ಜಿಲ್ಲೆಗಳಲ್ಲಿ ಇರುವಂತೆ ಕೃಷಿ ಪಂಪ್‌ಸೆಟ್‌ಗಳಿಗೆ ಬೇಷರತ್ತಾಗಿ ಉಚಿತ ವಿದ್ಯುತ್ ಕೂಡ ಇಲ್ಲ. ಇಲ್ಲೂ ಅದೇ ರೀತಿ ಉಚಿತ ವಿದ್ಯುತ್ ಕೊಡಬೇಕು ಎನ್ನುವ ಬೇಡಿಕೆ ಇತ್ತು. ಆದರೆ ಇದಕ್ಕೆ ಪೂರಕವಾದ ಯಾವುದೇ ಯೋಜನೆಗಳು ಬಜೆಟ್‌ನಲ್ಲಿ ಪ್ರಕಟವಾದಂತಿಲ್ಲ.
ಪ್ರವಾಸಿ ಜಿಲ್ಲೆಯಾಗಿ ಕೊಡಗು ಅಂತಾರಾಷ್ಟಿçÃಯ ಮಟ್ಟದಲ್ಲಿ ಹೆಸರು ಮಾಡಿದೆ. ಇಲ್ಲಿಯ ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಮೂಲಸೌಕರ್ಯ ಸೇರಿದಂತೆ ಹೊಸ ಯೋಜನೆಗಳು ಸರ್ಕಾರದಿಂದ ಘೋಷಣೆ ಆಗುವ ನಿರೀಕ್ಷೆ ಸ್ಥಳೀಯ ಪ್ರವಾಸೋದ್ಯಮಿಗಳಲ್ಲಿ ಇತ್ತು. ಆದರೆ ಈ ಬಗ್ಗೆಯೂ ನೇರವಾಗಿ ಕೊಡಗಿಗೆ ಸಂಬAಧಿಸಿದAತೆ ಯೋಜನೆಗಳು ಬಜೆಟ್‌ನಲ್ಲಿ ಕಂಡುಬAದಿಲ್ಲ.
ಕೊಡಗಿನಲ್ಲಿ ವನ್ಯಜೀವಿ-ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರದ ನಿರೀಕ್ಷೆಯಲ್ಲಿ ಸ್ಥಳೀಯರು ಇದ್ದಾರೆ. ಆದರೆ ವನ್ಯಪ್ರಾಣಿಗಳಿಂದ ಆಗುವ ಮಾನವ ಪ್ರಾಣ ಹಾನಿಯ ದಯಾತ್ಮಕ ಧನ 15 ಲಕ್ಷದಿಂದ 20 ಲಕ್ಷ ರೂ. ಬಜೆಟ್‌ನಲ್ಲಿ ಏರಿಕೆ ಮಾಡಲಾಗಿದೆ. ಆನೆ ಹಾವಳಿ ಪ್ರದೇಶಗಳಲ್ಲಿ 150 ಕಿಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 60 ಕೋಟಿ ರೂ. ಮೀಸಲಿಡಲಾಗಿದೆ. ಇದರಲ್ಲಿ ಕೊಡಗಿಗೆ ಎಷ್ಟು ಪಾಲು ಸಿಗಬಹುದು ಎನ್ನುವುದು ಸ್ಪಷ್ಟವಾಗಿಲ್ಲ.
ಮಳೆಗಾಲ ಬಂತೆAದರೆ ಸಾಕು ಕೊಡಗಿನಲ್ಲಿ ಭೂಕುಸಿತದ ಭೀತಿ ಎದುರಾಗುತ್ತದೆ. 2018ರ ಪ್ರಾಕೃತಿಕ ವಿಕೋಪದ ನಂತರ ಜಿಲ್ಲೆಯಲ್ಲಿ ಈ ಸಮಸ್ಯೆ ಸಾಮಾನ್ಯ ಎಂಬAತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಕೊಡಗು ಸೇರಿದಂತೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಭೂಕುಸಿತ ತಡೆಗೆ 200 ಕೋಟಿ ರೂ. ತೆಗೆದಿಡಲಾಗಿದೆ. ಇಲ್ಲೂ ಕೊಡಗಿಗೆ ಎಷ್ಟು ಪಾಲು ಸಿಗಲಿದೆ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಕಾವೇರಿ ಕಣಿವೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ 200 ಕೋಟಿ ರೂ., ಕೊಡಗು ಸೇರಿದಂತೆ ಹಾಡಿ ನಿವಾಸಿಗಳ ಮೂಲ ಸೌಕರ್ಯ ಅಭಿವೃದ್ಧಿಗೆ 200 ಕೋಟಿ ರೂ., ಜಿಐ ಟ್ಯಾಗ್ ಉತ್ಪನ್ನಗಳು, ಇತರ ತಳಿಗಳ ರಕ್ಷಣೆಗೆ ದೇಸಿ ಬೀಜ ಬ್ಯಾಂಕ್ ಸ್ಥಾಪನೆ ಹೀಗೆ ಕೆಲವೊಂದು ಯೋಜನೆಗಳು ಕೊಡಗಿಗೆ ಅನುಕೂಲ ಆಗುವಂತಿದ್ದು, ಜಿಲ್ಲೆಯ ಬಗ್ಗೆ ನೇರವಾಗಿ ಪ್ರಸ್ತಾಪ ಇಲ್ಲದಿದ್ದರೂ ಪ್ರಯೋಜನದ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ.
ಬಾಕ್ಸ್:
ಬಜೆಟ್‌ನಲ್ಲಿ ಕೊಡಗಿಗೆ ನೇರವಾಗಿ ಸಿಕ್ಕಿದ್ದೇನು ?
- ಪೊನ್ನಂಪೇಟೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ
- ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ನವೀಕರಣ
- ವಿರಾಜಪೇಟೆಯಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ
- ಬುಡಕಟ್ಟು ಜನಾಂಗದ ವಸತಿ ಶಾಲೆಗಳಲ್ಲಿ 12ನೇ ತರಗತಿ ತನಕ ಮೇಲ್ದರ್ಜೆಗೆ
- ವಿರಾಜಪೇಟೆ, ಪೊನ್ನಂಪೇಟೆ, ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಹಾನಿಗೊಳಗಾದ ರಸ್ತೆ, ಸೇತುವೆಗಳ ಪುನರ್‌ನಿರ್ಮಾಣಕ್ಕೆ 20 ಕೋಟಿ ರೂ.
- ಕೂಡಿಗೆ ಕ್ರೀಡಾ ಶಾಲೆ ಸೌಲಭ್ಯಗಳ ಉನ್ನತೀಕರಣಕ್ಕೆ 3 ಕೋಟಿ ರೂ.
- ಮಡಿಕೇರಿ-ದೋಣಿಗಲ್ (ಎನ್.ಹೆಚ್. 75) ಮಾದಾಪುರ- ಸೋಮವಾರಪೇಟೆ-ಕೊಡ್ಲಿಪೇಟೆ 95 ಕಿಮೀ ರಸ್ತೆ ಕೆಶಿಪ್ ಯೋಜನೆ ಅಡಿ ಅಭಿವೃದ್ಧಿ.