

ಮಡಿಕೇರಿ: ಕೊಡಗು ಬಚಾವೋ ವೇದಿಕೆ ವತಿಯಿಂದ ಸೆ೧೩ರಂದು ನಡೆಯಬೇಕಿದ್ದ ಕಾರ್ಯಕ್ರಮ ಸೆ೧೮ ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ವೇದಿಕೆಯ ಸದಸ್ಯ ಇಸಾಖ್‌ಖಾನ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦.೩೦ಕ್ಕೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿರುವ ’ಕೊಡಗು ಬಜಾವೋ’ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಠಾಧೀಶರು, ಕ್ರೈಸ್ತ ಫಾದರ್‌ಗಳು, ಮೌಲಾವಿಗಳು ಪಾಲ್ಗೊಳ್ಳಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಬಾಳೆಲೆ ನಿವೃತ್ತ ಪ್ರಾಂಶುಪಾಲ ಜಿ.ಸೋಮಣ್ಣ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸದಸ್ಯರಾದ ಬಿ.ಬಿ.ಪುಷ್ಪಾವತಿ ಮಾತನಾಡಿ, ಇತ್ತೀಚಿಗೆ ಮಹಿಳಾ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಯುವಕರು ಅರೆ ಉದ್ಯೋಗದಿಂದ ತಮ್ಮ ಭವಿಷ್ಯವನ್ನು ಅತಂತ್ರರಾಗಿಸಿಕೊಳ್ಳುತ್ತಿದ್ದಾರೆ. ಭ್ರಷ್ಟಚಾರ ಮಿತಿ ಮೀರಿದ್ದು, ಹಗರಣಗಳು ಹೆಚ್ಚಾಗುತ್ತಿದೆ ಇವುಗಳನ್ನು ಅವುಗಳನ್ನು ಪ್ರಶ್ನಿಸುವ ಕೆಲಸವನ್ನು ಕೊಡಗು ಬಚಾವೋ ವೇದಿಕೆ ಮಾಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಸದಸ್ಯರಾದ ಮೋಹನ್ ಮೌರ್ಯ ಸುನಂದ, ಗಣೇಶ್ ಕೋಳಿಮಾಡು, ತೆಕ್ಕಡೆ ಗುಲಾಬಿ ಜನಾರ್ಧನ್ ಉಪಸ್ಥಿತರಿದ್ದರು.