

ಮಡಿಕೇರಿ:
ನಗರದ ಕೊಡಗು ವಿದ್ಯಾಲಯದಲ್ಲಿ ದೀಪಾವಳಿ ಸಂಭ್ರಮವನ್ನು ಚಿಣ್ಣರು ನೃತ್ಯ ರೂಪಕದ ಮೂಲಕ ಶುಕ್ರವಾರ ಪ್ರಸ್ತುತ ಪಡಿಸಿದರು. ಕೊಡಗು ವಿದ್ಯಾಲಯದ ಚಿಗುರು ಸಭಾಂಗಣದಲ್ಲಿ ಆಯೋಜಿತ ದೀಪಾವಳಿ ಅಂಗವಾಗಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೀಪಾವಳಿ ಮಹತ್ವ ಸಾರುವ ನೃತ್ಯ ರೂಪಕವನ್ನು ಪ್ರಸ್ತುತಪಡಿಸಲಾಯಿತು, ಚಿಣ್ಣರು ಇತಿಹಾಸ, ಧಾರ್ಮಿಕ ಪರಂಪರೆ ಸಾರುವ ಉಡುಗೆ ಧರಿಸಿ ನೃತ್ಯದಲ್ಲಿ ್ಲ ಸಂಭ್ರಮದಿAದ ಪಾಲ್ಗೊಂಡರು,
ಸೀತಾ ಅಪಹರಣದ ಪ್ರಸಂಗ, ರಾವಣ ಸಂಹಾರ ಸೇರಿದಂತೆ ದೀಪಗಳ ಮಹತ್ವ ಸಾರುವ ನೃತ್ಯದÀ ಪ್ರಸ್ತುತಿ ಮನಸೆಳೆಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್. ಟಿ, ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕ ಸಿ.ಎಸ್. ಗುರುದತ್, ಸಲಹೆಗಾರ ಕೊಕ್ಕಲೇರ ಕುಮಾರ್ ಸುಬ್ಬಯ್ಯ, ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ. ರವಿ ಇದ್ದರು.