

ಹಿರೇಕೆರೂರ: ದನದ ಕೊಟ್ಟಗೆಯಲ್ಲಿ ಕಟ್ಟಿದ್ದ 1.20 ಲಕ್ಷ ರೂ. ಮೌಲ್ಯದ 2 ಜಸಿರ್ ಆಕಳುಗಳನ್ನು ಯಾರೋ ಕಳ್ಳತನ ಮಾಡಿದ ಟನೆ ತಾಲೂಕಿನ ಕೋಡ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಪುಲಕೇಶಪ್ಪ ತಿರಕಪ್ಪ ತುಳಜಮ್ಮನವರ (48) ಎಂಬುವರ ಆಕಳು ಕಳ್ಳತನವಾಗಿರುವುದು.
ಇವರು ತಮ್ಮ ಕೋಳಿ ಾಮ್ರ್ ಪಕ್ಕದ ದನದ ಕೊಟ್ಟಿಗೆಯಲ್ಲಿ ಆಕಳುಗಳನ್ನು ಕಟ್ಟಿದ್ದರು. ಯಾರೋ ಖದೀಮರು ಅವುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.