ನಾಳೆಯೇ ಕೋಚಿಮುಲ್​ ವಿಭಜನೆ!

kochimul
Published on

ಟೇಕಲ್​: ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಕ್ಕೂಟ ವಿಭಜನೆ ಯಾಗಬೇಕು ಎಂಬ ಕೂಗು ಮೊದಲಿನಿಂದಲೂ ಇದ್ದು, ಪ್ರಸ್ತುತ ಸಿದ್ದರಾಮಯ್ಯ ಅವರು ವಿಭಜನೆಗೆ ಅನುವು ಮಾಡಿಕೊಟ್ಟಿದ್ದು, ಅ.23ರಂದು ಒಕ್ಕೂಟ ವಿಭಜನೆಯಾಗುತ್ತದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಮಾಲೂರು ತಾಲೂಕು ಟೇಕಲ್​ ಹೋಬಳಿಯ ಕೊಮ್ಮನಹಳ್ಳಿಯಲ್ಲಿ ಸೋಮವಾರ ಜಿಲ್ಲಾ ಪಶು ಪಾಲನಾ ಇಲಾಖೆ, ಕೋಲಾರ&ಚಿಕ್ಕಬಳ್ಳಾಪುರ ಮೆಗಾ ಡೇರಿ ಸಹಾಯದೊಂದಿಗೆ ಪಶುಗಳಿಗೆ ಕಾಲುಬಾಯಿ ರೋಗ ತಡೆಗಟ್ಟಲು ಲಸಿಕೆ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಭಜನೆಗೆ ಹಿಂದಿನ ಸರ್ಕಾರ ಮಾತುಕತೆ ನಡೆಸದೆ ಕೋರ್ಟ್​ ಮೆಟ್ಟಿಲೇರಿತ್ತು. ಈಗ ಮುಖ್ಯಮಂತ್ರಿಗಳೂ ಒಪ್ಪಿದ್ದು, ಇದಕ್ಕೆ ನಮ್ಮ ಯಾವುದೇ ತಕರಾರು ಇಲ್ಲ. ಕೋಲಾರ ಜಿಲ್ಲೆಯಲ್ಲೇ 7.5 ಲಕ್ಷ ಲೀಟರ್​ ಹಾಲು ಉತ್ಪಾದನೆ ಇದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 4.5 ಲಕ್ಷ ಲೀಟರ್​ ಹಾಲು ಉತ್ಪಾದನೆಯಾಗುತ್ತಿದೆ. ನಾವು ವಿಭಜನೆಯಾದಲ್ಲಿ ಒಂದು ವರ್ಷದಲ್ಲಿ ಕೋಲಾರ ಜಿಲ್ಲೆಯಲ್ಲಿ ಹತ್ತು ಲಕ್ಷ ಲೀಟರ್​ ಹಾಲು ಉತ್ಪಾದನೆಯಾಗಬೇಕು. ಇದನ್ನು ಮನಗಂಡು ಜಿಲ್ಲೆಯ ಪ್ರತಿಹಳ್ಳಿಯಲ್ಲಿ ಸಂ ಸ್ಥಾಪನೆಗೆ ನೀಲಿ ನೆ ಸಿದ್ಧಪಡಿಸಲಾಗುತ್ತಿದೆ. ಇದರಿಂದ ಉತ್ತಮ ಹಾಲು ಸಿಗುತ್ತದೆ, ಉತ್ಪಾದನೆಯು ಹೆಚ್ಚುತ್ತದೆ ಎಂದರು.

ಪ್ರತಿ ಗ್ರಾಮದಲ್ಲೂ ಹಾಲು ಉತ್ಪಾದಕರ ಸಹಕಾರ ಸಂ ಸ್ಥಾಪನೆ ಮಾಡುವ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರ ಮೆಗಾ ಡೇರಿ ವಿಭಜನೆಯಾದರೂ ನಮ್ಮ ಕೋಲಾರ ಮೆಗಾ ಡೇರಿಯಲ್ಲಿ ನಿತ್ಯ 11 ಸಾವಿರ ಲೀ.ಹಾಲು ಉತ್ಪಾದನೆ ಮಾಡುವ ಗುರಿ ಮುಟ್ಟಲು ಅಧಿಕಾರಿಗಳು ಶ್ರಮಿಸಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಹಸುಗಳಿಗೆ ಕಾಲುಬಾಯಿ ರೋಗ ಬಾರದಂತೆ ಒಂದು ತಿಂಗಳ ಕಾಲ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ರಾಸುಗಳಿಗೆ ಲಸಿಕೆ ನೀಡಲಾಗುತ್ತಿದೆ. ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಮರಣವೂ ಹೊಂದಬಹುದು, ಇದೆಲ್ಲವನ್ನು ಅರಿತ ರಾಜ್ಯ ಸರ್ಕಾರ ಉಚಿತವಾಗಿ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ ಎಂದರು.

ಲಸಿಕೆಗೂ ಗರ್ಭಧಾರಣೆಗೂ ಸಂಬಂಧವಿಲ್ಲ

ಪಶುವೈದ್ಯ ಇಲಾಖೆ ಲಸಿಕೆ ಹಾಕಲು ಹಳ್ಳಿಗಳಿಗೆ ತೆರಳಿದಾಗ ಕೆಲವು ರೈತರು ಹಸು, ಎಮ್ಮೆಗಳಿಗೆ ಲಸಿಕೆ ಹಾಕುವುದು ಬೇಡ, ಲಸಿಕೆ ಹಾಕಿದರೆ ಗರ್ಭಧಾರಣೆ ವೇಲೆ ನಷ್ಟ ಸಂಭವಿಸುತ್ತದೆ ಎನ್ನುತ್ತಾರೆ. ಆದರೆ ಲಸಿಕೆ ಹಾಕುವುದಕ್ಕೂ ಗರ್ಭಧಾರಣೆಗೂ ಸಂಬಂಧವಿಲ್ಲ. ಲಸಿಕೆ ಹಾಕುವುದು ರೋಗ ತಡೆಗಟ್ಟುವ ಸಲುವಾಗಿ. ಇದರಿಂದ ತೊಂದರೆಯಾಗುವುದಿಲ್ಲ ಎಂದು ಶಾಸಕರು ತಿಳಿಸಿದರು.

ಗುಣಮಟ್ಟಕ್ಕೆ ಕೋಲಾರ ಪ್ರಸಿದ್ಧಿ

ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರ ಮಕ್ಕಳಿಗೆ ಸರ್ಕಾರದಿಂದ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿ ನಿಲಯ ನಿರ್ಮಿಸಿದ್ದು, ಮಕ್ಕಳಿಗೆ ಅನುಕೂಲವಾಗಲಿದೆ. ಆದ್ದರಿಂದ ಪ್ರತಿ ಹಳ್ಳಿಯಲ್ಲೂ ಹಾಲು ಉತ್ಪಾದಕರ ಸಂಗಳನ್ನು ಮಾಡಬೇಕು ಎಂದು ನಂಜೇಗೌಡ ಅವರು ಅಧಿಕಾರಿಗಳಿಗೆ ತಿಳಿಸಿದರು. ರಾಜ್ಯದಲ್ಲಿ ಕೋಲಾರ ಒಕ್ಕೂಟವು ಗುಣಮಟ್ಟದ ಹಾಲಿಗೆ ಹೆಸರು ಪಡೆದಿದೆ. ಅದರಂತೆ ಸೋಲಾರ್​ ಪ್ಲಾಂಟ್​, ಎಂವಿಕೆ ಗೋಲ್ಡನ್​ ಡೇರಿ, ಐಸ್​ಕ್ರೀಂ ಪಾರ್ಲರ್​, ಹಾಲು ಉತ್ಪಾದಕರ ಮಕ್ಕಳಿಗೆ ಹಾಸ್ಟೆಲ್​ ನಿರ್ಮಾಣ, ಮೆಗಾ ಡೇರಿಯಲ್ಲಿ ಯಂತ್ರೋಪಕರಣ ಅಳವಡಿಕೆ, ರಾಸುಗಳಿಗೆ ವಿಮಾ ಪಾಲಿಸಿ ಇನ್ನೂ ಹಲವು ಯೋಜನೆಗಳನ್ನು ನೀಡಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net