ಕೋಟ ಶ್ರೀನಿವಾಸ ಪೂಜಾರಿಗೆ ಸಾಲವೇ ಇಲ್ಲ: 26.86 ಲಕ್ಷ ರೂ. ಮೌಲ್ಯದ ಚರಾಸ್ತಿ, 36 ಲಕ್ಷ ರೂ. ಮೌಲ್ಯದ ಸ್ವಯಾರ್ಜಿತ ಸ್ಥಿರಾಸ್ತಿ

KOTA Srinivasa poojary
Published on

ಮಂಗಳೂರು: ವಿಧಾನ ಪರಿಷತ್‌ಗೆ ದ.ಕ. ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು 26.86 ಲಕ್ಷ ರೂ. ಹಾಗೂ ಅವರ ಪತ್ನಿ ಶಾಂತಾ 7.41 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 36 ಲಕ್ಷ ರೂ. ಮೌಲ್ಯದ ಸ್ವಯಾರ್ಜಿತ ಸ್ಥಿರಾಸ್ತಿ ಹಾಗೂ ಪತ್ನಿ 1.37 ಕೋಟಿ ರೂ. ಮೌಲ್ಯದ ಸ್ವಯಾರ್ಜಿತ ಆಸ್ತಿ ಹೊಂದಿದ್ದಾರೆ. ಕೋಟ ಅವರಿಗೆ ಯಾವುದೇ ಸಾಲ ಇಲ್ಲ. ಪತ್ನಿ ಹೆಸರಲ್ಲಿ 40 ಲಕ್ಷ ರೂ.ಗೃಹ ಸಾಲವಿದೆ.

ನಗದು: 30 ಸಾವಿರ ರೂ., ಅಪೆಕ್ಸ್ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ 1.10 ಲಕ್ಷ ರೂ., ಕೋಟ ಅಂಚೆ ಕಚೇರಿಯಲ್ಲಿ ಪತ್ನಿ ಮತ್ತು ಮೂವರು ಮಕ್ಕಳು ತಲಾ 40 ಸಾವಿರ ರೂ. ಮೊತ್ತದ ಅರ್.ಡಿ.ಖಾತೆ.

ವಾಹನ : 2 ಲಕ್ಷ ರೂ.ಮೌಲ್ಯದ ಆಲ್ಟೊ, 23 ಲಕ್ಷ ರೂ. ಮೌಲ್ಯದ ಟೊಯೊಟಾ ಇನ್ನೋವಾ, ಮಗನ ಬಳಿ 16.3 ಲಕ್ಷ ರೂ. ಮೌಲ್ಯದ ಹೋಂಡಾ ಸಿಟಿ ಕಾರು.

*ಚಿನ್ನ : 46 ಸಾವಿರ ರೂ.ಮೌಲ್ಯದ ಚಿನ್ನ, ಪತ್ನಿ ಬಳಿ 6.91 ಲಕ್ಷ ರೂ.ಮೌಲ್ಯದ ಚಿನ್ನಾಭರಣ.

ಭೂಮಿ : ಕೋಟತಟ್ಟು ಗ್ರಾಮದಲ್ಲಿ 6 ಲಕ್ಷ ರೂ. ಮೌಲ್ಯದ ಭೂಮಿ ಹಾಗೂ ಬೆಂಗಳೂರಿನಲ್ಲಿ ಅಂದಾಜು 30 ಲಕ್ಷ ರೂ. ಮೌಲ್ಯದ ಶಾಸಕರ ನಿವೇಶನ, ಪತ್ನಿ ಹೆಸರಿನಲ್ಲಿ ಕೋಟತಟ್ಟು ಗ್ರಾಮದಲ್ಲಿ 50 ಲಕ್ಷ ರೂ. ಮೌಲ್ಯದ ಭೂಮಿ ಹಾಗೂ ಗಿಳಿಯಾರು ಗ್ರಾಮದಲ್ಲಿ 87.50 ಲಕ್ಷ ರೂ. ಲಕ್ಷ ರೂ. ಮೌಲ್ಯದ ಭೂಮಿ ಮತ್ತು ನಿರ್ಮಾಣ ಹಂತದಲ್ಲಿರುವ ಮನೆ.

ಸಾಲ: ಪತ್ನಿಗೆ 40 ಲಕ್ಷ ರೂ. ಗೃಹ ನಿರ್ಮಾಣ ಸಾಲ, ಮಗನಿಗೆ 8.30 ಲಕ್ಷ ರೂ. ವಾಹನ ಸಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net