ಕೋ. ಮ. ಕಾರಂತ ಪ್ರಶಸ್ತಿಗೆ ರವಿ ಬಸ್ರೂರು ಆಯ್ಕೆ

Ravi Basrur
Published on


ಕುಂದಾಪುರ: ಕುಂದಪ್ರಭ ಸಂಸ್ಥೆ ಪ್ರದಾನ ಮಾಡುವ ಕೋ.ಮಾ.ಕಾರಂತ ಪ್ರಶಸ್ತಿಗೆ ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸ್ರೂರು ಆಯ್ಕೆ ಆಗಿದ್ದಾರೆ.
ಪತ್ರಕರ್ತ, ಅಂಕಣಗಾರ ಕೋಣಿ ಮಹಾಬಲೇಶ್ವರ ಕಾರಂತರ ಹೆಸರಲ್ಲಿ ಕಳೆದ 22 ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಂದಾಪುರ ಮೂಲದ ಸಾಧಕರಿಗೆ ಕೋ. ಮ. ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಹಾಗೂ ಕುಂದ ಕನ್ನಡ ಭಾಷಾ ಅಭಿವೃದ್ಧಿಗೆ ಕೊಡುಗೆ ನೀಡಿದ ರವಿ ಬಸ್ರೂರು ಈ ವರ್ಷದ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು ಎಂದು ಸಾಹಿತಿ ಕೋ. ಶಿವಾನಂದ ಕಾರಂತ ತಿಳಿಸಿದ್ದಾರೆ.

ಬಸ್ರೂರು ಗ್ರಾಮೀಣ ಪ್ರದೇಶದಲ್ಲಿ 2012ರಲ್ಲಿ ಪಣ್ಕ ಮಕ್ಳ ಎಂಬ ಕುಂದ ಕನ್ನಡ ಆಲ್ಬಂ ಬಿಡುಗಡೆ ಮೂಲಕ ಖ್ಯಾತರಾದ ರವಿ ಬಸ್ರೂರು ಕನ್ನಡ ಚಿತ್ರರಂಗದಲ್ಲಿ ಉಗ್ರಂ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವ ಮೂಲಕ ರಾಜ್ಯ ಮಟ್ಟದಲ್ಲಿ ಖ್ಯಾತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net