

ಬೆಳಗಾವಿ: ಜಗತ್ತು ತಾಂತ್ರಿಕವಾಗಿ ಬದಲಾಗುತ್ತಿದೆ. ಅದರಂತೆ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಕೆಯಿಂದ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ನಾಗನೂರ ರುದ್ರಾ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ನಗರದ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯಲ್ಲಿ ಮಾತನಾಡಿದರು. ಡಾ.ಕಿರಣಕುಮಾರ ಸವಣೂರ ಮಾತನಾಡಿದರು. ಸಂಸ್ಥೆಯ ಚೇರ್ಮನ್ ಎ್.ವಿ.ಮಾನ್ವಿ, ಪ್ರಾಂಶುಪಾಲ ಡಾ.ಬಿ.ಆರ್.ಪಟಗುಂದಿ, ಗ್ರಂಥಪಾಲಕರಾದ ನಳಿನಿ ಅಂಬಲಿ,ಯಲ್ಲಪ್ಪ ಮಡಿವಾಳರ, ವಿಠ್ಠಲ ಕುರುಬರ, ಶಶಿಕಲಾ ಹೊಸಮಠ ಇತರರಿದ್ದರು.