ಮಣ್ಣಿನ ಲವತ್ತತೆ ತಿಳಿವಳಿಕೆ ಅವಶ್ಯ

Knowledge of soil salinity is essential.
ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದಲ್ಲಿ ಬಿಎಲ್​ಡಿಇ ಸಂಸ್ಥೆಯ ಎಸ್​ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದ ರಾಸಾಯನಶಾಸ್ತ ವಿಭಾಗ ವತಿಯಿಂದ ರೈತರಿಗಾಗಿ ಒಂದು ದಿನದ ಮಣ್ಣು ಮತ್ತು ನೀರಿನ ಪರೀೆಯ ಬಗ್ಗೆ ವಿಶೇಷ ಶಿಬಿರ ನಡೆಯಿತು. ಡಾ. ಎಸ್​.ಡಿ. ಲಮಾಣಿ, ಮಹೇಶ ಕುಮಾರ ಕೆ., ಡಾ. ಎಸ್​.ಎನ್​. ಉಂಕಿ ಮತ್ತಿತರರಿದ್ದಾರೆ.
Published on

ವಿಜಯಪುರ: ನಮ್ಮ ದೇಶ ಕೃಷಿ ಪ್ರಧಾನವಾದದ್ದು. ವಿದ್ಯಾರ್ಥಿಗಳು ಮಣ್ಣಿನ ಫಲವತ್ತತೆ ಮತ್ತು ನೀರಿನ ಬಗ್ಗೆ ಅರಿಯುವುದು ಮತ್ತು ಪ್ರಯೋಗಿಕ ಕಲಿಕೆ ಅವಶ್ಯಕವಾಗಿದೆ ಎಂದು ರಸಾಯನಶಾಸ್ತ ವಿಭಾಗ ಮುಖ್ಯಸ್ಥ ಡಾ. ಎಸ್​.ಡಿ. ಲಮಾಣಿ ಹೇಳಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಎಸ್​ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದ ರಸಾಯನಶಾಸ್ತ ವಿಭಾಗ, ಐಕ್ಯೂಎಸಿ ಸಹಯೋಗದಲ್ಲಿ ಸೋಮವಾರ ಇಟ್ಟಂಗಿಹಾಳ ಗ್ರಾಮದಲ್ಲಿ ರೈತರಿಗಾಗಿ ಒಂದು ದಿನದ ಮಣ್ಣು ಮತ್ತು ನೀರಿನ ಪರೀೆ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.

ಮಹಾವಿದ್ಯಾಲಯದ ರಸಾಯನಶಾಸ್ತ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮದ ರೈತರ ಜೊತೆಗೂಡಿ ಅವರ ಹೊಲ&ಗದ್ದೆಗಳಿಗೆ ಭೇಟಿ ನೀಡಿ, ಹೊಲದಲ್ಲಿನ ಮಣ್ಣು ಮತ್ತು ನೀರು ಸಂಗ್ರಹಿಸಿ ಅದರ ಪರೀೆ ಮಾಡಿ ರೈತರಿಗೆ ವರದಿ ಸಲ್ಲಿಸಿದರು.

ವಿಶೇಷ ಶಿಬಿರದಲ್ಲಿ ಮಣ್ಣು ಮತ್ತು ನೀರಿನ ಪರೀೆ ಬಗ್ಗೆ ವಿಭಾಗದ ಪ್ರಾಧ್ಯಾಪಕ ಮಹೇಶ ಕುಮಾರ ಕೆ., ಡಾ. ಎಸ್​.ಎನ್​. ಉಂಕಿ, ಮಾಲತಿ ಚನಗೊಂಡ, ಅನಿಲ ಪಾಟೀಲ ಮತ್ತಿತರರು ವಿದ್ಯಾರ್ಥಿಗಳಿಗೆ ಮಣ್ಣು ಮತ್ತು ನೀರಿನ ವಿಶ್ಲೇಷಣೆ ಮಾಡಲು ಮಾರ್ಗದರ್ಶನ ನೀಡಿದರು.

ರೈತರಿಗೋಸ್ಕರ ಉಚಿತ ಮಣ್ಣು ಮತ್ತು ನೀರಿನ ಪರೀೆ ಮಾಡಿಕೊಟ್ಟ ರೈತ ಮುಖಂಡರಾದ ವಾಸು ತಂಗಡಿ, ಬಿ.ಆರ್​. ಕುಲಕರ್ಣಿ, ವಿಠಲ ಮುಚ್ಚಂಡಿ, ಕಲ್ಲಪ್ಪ ಕಕಮರಿ, ಬಾಬು ಗುಲಗಂಚಿ, ಸಿದ್ದು ಗುಲಗಂಚಿ ಅವರು ಬಿಎಲ್​ಡಿಇ ಸಂಸ್ಥೆ ಅಧ್ಯಕ್ಷ, ಸಚಿವ ಎಂ.ಬಿ. ಪಾಟೀಲರಿಗೆ, ಮಹಾವಿದ್ಯಾಲಯದ ಪ್ರಾಚಾಯೆರ್ ಡಾ. ಆರ್​.ಎಂ. ಮಿರ್ದೆ ಅವರಿಗೆ ಧನ್ಯವಾದ ಸಮರ್ಪಿಸಿದರು.

ಎಲ್​ಡಿಇ ಸಂಸ್ಥೆ ಕಾನೂನು ಕೋಶದ ಸಹ ನಿರ್ದೇಶಕ ಸೂರ್ಯಕಾಂತ ಬಿರಾದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net