ಸಾಮಾಜಿಕ ಭದ್ರತಾ ಯೋಜನೆ ಅರಿವು ಅವಶ್ಯ

ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್ ಜಿಲ್ಲಾ ಕಷಿ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಗ್ರಾಪಂ ಮಟ್ಟದ ಆರ್ಥಿಕ ಯೋಜನೆಗಳ ಪರಿಪೂರ್ಣತೆ ಅಭಿಯಾನವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಜಿಲ್ಲಾ ವಿಭಾಗದ ಮುಖ್ಯಸ್ಥ ನಿತ್ಯಾನಂದ ಕುಲ್ಲೋಳಿ ಉದ್ಘಾಟಿಸಿದರು. ಎಸ್‌ಬಿಐ ಆರ್ಥಿಕ ಸಾಕ್ಷರತಾ ಸಲಹೆಗಾರ ಟಿ.ಆಂಜನೇಯ, ಪಿಡಿಒ ಸುರೇಶ ಛಲವಾದಿ, ವಲಯ ಹಿರಿಯ ವ್ಯವಸ್ಥಾಪಕ ಗಿರೀಶ್ ಇದ್ದರು.

Published on

ಗಂಗಾವತಿ: ಆರ್ಥಿಕವಾಗಿ ಸದೃಢರಾಗಲು ಬ್ಯಾಂಕ್ ಸೌಲಭ್ಯಗಳು ಪೂರಕವಾಗಿದ್ದು, ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಜಿಲ್ಲಾ ವಿಭಾಗದ ಮುಖ್ಯಸ್ಥ ನಿತ್ಯಾನಂದ ಕುಲ್ಲೋಳಿ ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್ ಜಿಲ್ಲಾ ಕಷಿ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಪಂ ಮಟ್ಟದ ಆರ್ಥಿಕ ಯೋಜನೆಗಳ ಪರಿಪೂರ್ಣತೆ ಅಭಿಯಾನದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಸಾರ್ವಜನಿಕರ ಸಾಮಾಜಿಕ ಭದ್ರತೆಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಜೀವನ ಭದ್ರತೆಗಾಗಿ ಬ್ಯಾಂಕ್ ಖಾತೆ ಹೊಂದುವುದು ಅಗತ್ಯವಿದ್ದು, ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಎಲ್ಲರೂ ಮಾಹಿತಿ ಪಡೆಯಬೇಕು ಎಂದರು.

ಎಸ್‌ಬಿಐ ಆರ್ಥಿಕ ಸಾಕ್ಷರತಾ ಸಲಹೆಗಾರ ಟಿ.ಆಂಜನೇಯ ಮಾತನಾಡಿ, ಕೇಂದ್ರ ಸರ್ಕಾರ, ರಾಜ್ಯ ಮಾರ್ಗದರ್ಶಿ ಬ್ಯಾಂಕ್ ನಿರ್ದೇಶನದಂತೆ ಪ್ರತಿ ಗ್ರಾಪಂ ಮಟ್ಟದಲ್ಲಿ ಸ್ಥಳೀಯ ಬ್ಯಾಂಕ್ ಸಹಯೋಗದಲ್ಲಿ ಆರ್ಥಿಕ ಸೇರ್ಪಡೆ ಪರಿಪೂರ್ಣತೆ ಅಭಿಯಾನ ಆಯೋಜಿಸಲಾಗಿದೆ. ಇ-ಕೆವೈಸಿ ಮರು ಸೇರ್ಪಡೆ, ನಾಮ ನಿರ್ದೇಶನ ಸೌಲಭ್ಯ, ಜನ್‌ಧನ್ ಖಾತೆ ಪ್ರಾರಂಭ, ಸಾಮಾಜಿಕ ಭದ್ರತೆ ಯೋಜನೆಗಳು, ಡಿಜಿಟಲ್ ಬ್ಯಾಂಕಿಂಗ್, ಸೈಬರ್ ಕ್ರೈಂ ಸೇರಿ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ನಂತರ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲ ಮಂಜೂರಾತಿ ಪತ್ರ ವಿತರಿಸಲಾಯಿತು. 50ಕ್ಕೂ ಹೆಚ್ಚು ಭದ್ರತಾ ಯೋಜನೆಗಳ ಅರ್ಜಿ ಸ್ವೀಕರಿಸಲಾಯಿತು.

ಪಿಡಿಒ ಸುರೇಶ ಛಲವಾದಿ, ವಲಯ ಹಿರಿಯ ವ್ಯವಸ್ಥಾಪಕ ಗಿರೀಶ್, ಬಸಾಪಟ್ಟಣ ಶಾಖೆ ವ್ಯವಸ್ಥಾಪಕ ಯೋಗೀಶ್, ವಲಯ ಅಧಿಕಾರಿ ವೀರೇಶ್, ಗಂಗಾವತಿ ಶಾಖಾ ವ್ಯವಸ್ಥಾಪಕ ನಿಂಗನಗೌಡ ಪಾಟೀಲ್, ಸಿಬ್ಬಂದಿ ರವಿಕುಮಾರ, ರಾಜು, ಪ್ರತಿನಿಧಿಗಳಾದ ಬಸವರಾಜ್, ಮಲ್ಲಯ್ಯ, ವೀರನಗೌಡ, ಶೋಭಾ, ನೇತ್ರಾವತಿ, ಶೈನಾಜಬೇಗಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net