

ಮೂಲ್ಕಿ: ವಿಜ್ಞಾನ, ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸಿಕೊಂಡು ಶೈಕ್ಷಣಿಕ ಸಾಧಕರಾಗಿ ಜೀವನದಲ್ಲಿ ಹೊಸ ಹುರುಪಿನೊಂದಿಗೆ ಅಭಿವದ್ಧಿಯತ್ತ ಸಾಗಬೇಕು ಎಂದು ಬ್ಯಾಂಕ್ ಆಫ್ ಬರೋಡಾ ಮಂಗಳೂರು ಶಾಖೆಯ ಹಿರಿಯ ಪ್ರಬಂಧಕಿ ಪ್ರಿಯಾಂಕಾ ದೇವಾಡಿಗ ಹೇಳಿದರು.
ಮೂಲ್ಕಿ ವಿಜಯ ಕಾಲೇಜಿನಲ್ಲಿ ಶನಿವಾರ ಅಂತರ್ ಕಾಲೇಜು ಪದವಿಪೂರ್ವ ಮಟ್ಟದ ಪ್ರತಿಭಾ ಸ್ಪರ್ಧೆೆ ವಿಜಯೋತ್ಸವವಿವಂತ-2024 ಉದ್ಘಾಟಿಸಿ ಮಾತನಾಡಿದರು.
ವಿಜಯ ಕಾಲೇಜು ಆಡಳಿತ ಮಂಡಳಿ ಸದಸ್ಯ ಎಂ.ಬಿ.ಖಾನ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ನೂತನ ತಂತ್ರಜ್ಞಾನದ ತಿಳಿವಳಿಕೆ ಮತ್ತು ಪ್ರಾಪಂಚಿಕ ಜ್ಞಾನ ಪಡೆಯಲು ಪ್ರತಿಭಾ ಸ್ಪರ್ಧೆಗಳು ಉತ್ತಮ ವೇದಿಕೆಯಾಗಿವೆ ಎಂದರು.
ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ ಭಟ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಪ್ರೊ.ಸ್ಯಾಮ್ ವಾಬೆನ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶೈಲಜಾ ವೈ.ವಿ., ಐಕ್ಯುಎಸಿ ಸಂಯೋಜಕ ಪ್ರೊ.ದೇವದಾಸ್ ಕೆ. ಅತಿಥಿಗಳಾಗಿದ್ದರು.
ಕಾಲೇಜು ಕಂಪ್ಯೂಟರ್ ವಿಭಾಗ ಮುಖ್ಯಸ್ಥೆ ಜ್ಯೋತಿ ಶಂಕರ್ ಸಾಲ್ಯಾನ್ ಪ್ರಸ್ತಾವನೆಗೈದರು. ವಾಣಿಜ್ಯ ವಿಭಾಗ ಮುಖ್ಯಸ್ಥೆ ಶರ್ಮಿಳಾ ರಾಜೇಶ್ ಸ್ವಾಗತಿಸಿದರು. ಸಾನ್ವಿ ಪ್ರಾರ್ಥಿಸಿದರು. ಪ್ರಾಪ್ತಿ ನಿರೂಪಿಸಿದರು. ಬಿಂದಿಯಾ ವಂದಿಸಿದರು.