ಪೋಸ್ಕೋ ಕಾಯ್ದೆಯ ತಿಳಿವಳಿಕೆ ಅಗತ್ಯ

22 GVT 02
ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಲೈಂಗಿಕ ಕಿರುಕುಳ ವಿರುದ್ಧದ ಪ್ರತಿರೋಧ ಮತ್ತು ಜಾಗೃತಿ ಕಾರ್ಯಾಗಾರವನ್ನು ಸಂಚಾರಿ ಠಾಣೆ ಪಿಎಸೈ ಶಾರದಮ್ಮ ಉದ್ಘಾಟಿಸಿದರು. ಲೈಂಗಿಕ ಕಿರುಕುಳ ವಿರೋಧಿ ಕೋಶದ ಸಂಯೋಜಕಿ ಎ.ಭೂಮಿಕಾ, ಪ್ರಾಧ್ಯಾಪಕರಾದ ಡಾ. ಶಿವರಾಜ ಗುರಿಕಾರ, ಪ್ರೊ.ಜಗದೇವಿ ಎಂ.ಕಲಶೆಟ್ಟಿ, ಮೆಹತಾಬ ಅಂಜುಮ್, ಅನಿತಾ, ರಾಘಮ್ಮ, ಡಾ. ಶಿಲ್ಪಾ, ಡಾ.ಉಷಾರಾಣಿ, ದೊಡ್ಡಬಸಮ್ಮ ಇತರರಿದ್ದರು.
Published on

ಗಂಗಾವತಿ: ಲೈಂಗಿಕ ಕಿರುಕುಳದ ವಿರುದ್ಧ ಮಹಿಳೆಯರು ಜಾಗೃತರಾಗಬೇಕಿದ್ದು, ಮಹಿಳಾ ರಕ್ಷಣೆಗೆ ಪೂರಕವಾದ ಪೋಸ್ಕೋ ಕಾಯ್ದೆ ಬಗ್ಗೆ ತಿಳಿವಳಿಕೆ ಅಗತ್ಯ ಎಂದು ಸಂಚಾರಿ ಠಾಣೆ ಪಿಎಸೈ ಶಾರದಮ್ಮ ಹೇಳಿದರು.

ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಲೈಂಗಿಕ ಕಿರುಕುಳ ವಿರೋಧಿ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದಡಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೈಂಗಿಕ ಕಿರುಕುಳ ವಿರುದ್ಧದ ಪ್ರತಿರೋಧ ಮತ್ತು ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಲೈಂಗಿಕ ಕಿರುಕುಳದ ಹೆಚ್ಚು ಸಂದರ್ಭಗಳಲ್ಲಿ ಮಹಿಳೆಗೆ ಮಾತ್ರ ಬುದ್ದಿವಾದ ಹೇಳುವ ಸಮಾಜದ ತಿಳಿವಳಿಕೆ ಇನ್ನೂ ಬದಲಾಗಿಲ್ಲ. ಬದಲಾಯಿಸುವ ಹಾಗೆ ಮಹಿಳೆಯರು ಬದಲಾಗಬೇಕಾಗಿದೆ. ಪೋಸ್ಕೋ ಕಾಯ್ದೆಯಲ್ಲಿ ಮಹಿಳೆಯರ ರಕ್ಷಣೆಗೆ ಅನೇಕ ಕಾನೂನುಗಳಿವೆ. ಅವುಗಳ ತಿಳಿವಳಿಕೆ ಮತ್ತು ಜಾಗತಿ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದರು.

ಪ್ರಾಂಶುಪಾಲೆ ಡಾ.ಮುಮ್ತಾಜ್ ಬೇಗಂ ಮಾತನಾಡಿ, ಹೆಣ್ಣನ್ನು ದೇಹ ಮೀಮಾಂಸೆಯ ನೆಲೆಯಲ್ಲಿ ಕಾಣಲಾಗುತ್ತಿದೆ. ಹೆಣ್ಣಿನ ಪ್ರಾಮುಖ್ಯತೆ ಗೌಣಗೊಳಿಸುತ್ತಾ ಬಂದಿರುವ ಇತಿಹಾಸ ನಮ್ಮ ಮುಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net