ಪೋಕ್ಸೋ ಕಾಯ್ದೆ ಅರಿವು ಅವಶ್ಯ

ಚೇಳೂರು ಗ್ರಾಮದ ಎಚ್​ವಿಎನ್​ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ತಡೆ ಕುರಿತ ಒಂದು ದಿನದ ಕಾರ್ಯಗಾರವನ್ನು ಹಿರಿಯ ಸಿವಿಲ್​ ನ್ಯಾಯಾಧೀಶೆ ಎ.ಅರುಣಾಕುಮಾರಿ ಉದ್ಘಾಟಿಸಿದರು. ನ್ಯಾಯಾಧೀಶ ಜೆ.ರಂಗಸ್ವಾಮಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ ಇತರರು ಇದ್ದರು.
Pocso Kayde Arivu Avashya
Published on

ಹಿರಿಯ ಸಿವಿಲ್​ ಜಿಲ್ಲಾ ನ್ಯಾಯಾಧೀಶೆ ಎ.ಅರುಣಾಕುಮಾರಿ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಚೇಳೂರು
ಇತ್ತೀಚೆಗೆ ಬಾಲ್ಯ ವಿವಾಹ ಹಾಗೂ ಪೋಕ್ಸೋ ಕಾಯ್ದೆಯಂಥ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಹಾಗೂ ಹೆಣ್ಣು ಮಕ್ಕಳ ಪಾಲಕರಿಗೆ ಅರಿವು ಮೂಡಿಸಬೇಕು ಎಂದು ಹಿರಿಯ ಸಿವಿಲ್​ ಜಿಲ್ಲಾ ನ್ಯಾಯಾಧೀಶೆ ಎ.ಅರುಣಾಕುಮಾರಿ ತಿಳಿಸಿದರು.
ಚೇಳೂರಿನ ಎಚ್​ವಿಎನ್​ ಕಲ್ಯಾಣ ಮಂಟಪದಲ್ಲಿ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ಕರ್ನಾಟಕ ಬಾಲ್ಯ ವಿವಾಹ ವಿರೋಧ ವೇದಿಕೆ, ಬಾಗೇಪಲ್ಲಿ ಮಹಿಳಾ ಸಾಂತ್ವನ ಕೇಂದ್ರ, ಶಿಕ್ಷಣ ಇಲಾಖೆ, ಪೊಲೀಸ್​ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಕ್ಕಳಿಗೆ ವಿವಾಹ ಮಾಡಬೇಕಾದರೆ ಅವರಿಗೆ 18 ವರ್ಷ ತುಂಬಿರಬೇಕು, 18 ವರ್ಷದೊಳಗಿನ ಮಕ್ಕಳಿಗೆ ವಿವಾಹ ಮಾಡಿದರೆ ಅದು ಕಾನೂನು ಅಪರಾಧವಾಗಲಿದ್ದು, ಪಾಲಕರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ ಬಾಲ್ಯ ವಿವಾಹ ಪ್ರಮಾಣ ಹೆಚ್ಚಿದೆ. ಇದನ್ನು ತಡೆಗಟ್ಟಲು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಸಹಕರಿಸಬೇಕು. ಬಾಲ್ಯ ವಿವಾಹದಿಂದ ಅವರ ಮನಸು ಸ್ಥೀಮಿತವಾಗಿ ಇರುವುದಿಲ್ಲ, ಇದರಿಂದ ಅವರಿಗೆ ಒತ್ತಡಗಳು ಹೆಚ್ಚಾಗುತ್ತವೆ. ಮುಂದಿನ ದಿನಗಳಲ್ಲಿ ಹೆಚ್ಚು ಅನಾಹುತಗಳು ಸಂಭವಿಸಬಹುದಾಗಿದೆ ಎಂದರು.
ಬಾಗೇಪಲ್ಲಿ ಸಿವಿಲ್​ ಮತ್ತು ಜೆಎಂಎಫ್​ಸಿ ನ್ಯಾಯಾಧೀಶ ಜೆ.ರಂಗಸ್ವಾಮಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಎ.ಜಿ.ಸುಧಾಕರ್​, ರಾಮೇಗೌಡ, ಸರ್ಕಾರಿ ಅಭಿಯೋಜಕ ಸಿ.ಎನ್​.ಚಿನ್ನಸ್ವಾಮಿ, ವಕೀಲರಾದ ಜಿ.ಎನ್​.ನಂಜಪ್ಪ, ರಾಮಾಂಜಿ, ಎನ್​.ಪ್ರಸನ್ನಕುಮಾರ್​, ಎ.ಮಂಜುನಾಥ್​, ಫಯಾಜ್​ಪಾಷ, ತಾಲೂಕು ವೈದ್ಯಾಧಿಕಾರಿ ಡಾ.ಸಿ.ಎನ್​.ಸತ್ಯನಾರಾಯಣರೆಡ್ಡಿ, ಬಾಲ್ಯ ವಿವಾಹ ವಿರೋಧ ವೇದಿಕೆ ಸಂಚಾಲಕ ಜಿ.ವೆಂಕಟೇಶ್​, ಹಾಗೂ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಎಸ್​.ಹರೀಶ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net