ಎಲ್ಲ ವಿಷಯದಲ್ಲೂ ಕಾನೂನಿನ ಅರಿವು ಅವಶ್ಯಕ

4thyagarthi1
ಉಳ್ಳೂರಿನ ಸಾಗರ ಗಂಗೋತ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಅಂಜಲಿ ಅವರನ್ನು ಸನ್ಮಾನಿಸಲಾಯಿತು. ಎನ್.ನಾಗರಾಜ್, ಕೃಷ್ಣಮೂರ್ತಿ ಬಿಳೆಗಲ್ಲೂರು, ವಿ.ಎಸ್.ವಿನಯ್, ಮರಿದಾಸ್ ಇತರರಿದ್ದರು.
Published on

ತ್ಯಾಗರ್ತಿ: ಕಾನೂನಿನ ಅರಿವು ಎಲ್ಲ ವಿಷಯದಲ್ಲೂ ಅವಶ್ಯಕ. ಪ್ರತಿಯೊಬ್ಬರೂ ಮೂಲ ಹಕ್ಕುಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದು ಕೆಎಸ್‌ಆರ್‌ಟಿಸಿ ನಿವೃತ್ತ ಕಾನೂನು ಅಧಿಕಾರಿ ಎನ್.ನಾಗರಾಜ್ ಹೇಳಿದರು.

ಉಳ್ಳೂರು ಸಿಗಂದೂರೇಶ್ವರಿ ಎಜುಕೇಶನಲ್ ಟ್ರಸ್ಟ್‌ನ ಸಾಗರ ಗಂಗೋತ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ವಾರ್ಷಿಕ ದಿನಾಚರಣೆ, ಪ್ರತಿಭಾ ಪುರಸ್ಕಾರ, ಬೀಳ್ಕೊಡುಗೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸೀಮಿತವಾದ ಗಡಿಯನ್ನು ಹಾಕಿಕೊಳ್ಳದೆ ಎಲ್ಲ ರಂಗಗಳಲ್ಲೂ ಕನಿಷ್ಠ ತಿಳಿವಳಿಕೆ ಹೊಂದಿರಬೇಕು. ರೂಢಿ ಮತ್ತು ಪದ್ಧತಿಗಳು ಕಾನೂನಿಗಿಂತ ಮಿಗಿಲಾಗಿದ್ದು ಸಮಸ್ಯೆಗಳು ಬಂದಾಗ ಈ ನೆಲದ ಕಾನೂನುಗಳ ಅರಿವು ಹೊಂದಿದ್ದರೆ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿವಳಿಕೆ ಹೊಂದಿರಬೇಕು ಹಾಗೂ ಲ್ಯಾಂಡ್ ಮಾರ್ಕ್ ಜಡ್ಜ್‌ಮೆಂಟ್‌ಗಳನ್ನು ಓದುತ್ತಿರಬೇಕು ಎಂದು ಹೇಳಿದರು.
ಹಿರಿಯ ವಕೀಲ ಮರಿದಾಸ್ ಮಾತನಾಡಿ, ಕಾನೂನು ವಿದ್ಯಾರ್ಥಿಗಳಿಗೆ ಉದ್ಯೋಗ, ಜೀವನ ರೂಪಿಸಿಕೊಳ್ಳಲು ಬೇಕಾದಷ್ಟು ಅವಕಾಶಗಳಿವೆ. ಪ್ರಾಮಾಣಿಕವಾಗಿ ದುಡಿದರೆ ವೃತ್ತಿಯಲ್ಲಿ ಯಶಸ್ವಿ ಆಗಬಹುದು ಎಂದರು.
2021-22ನೇ ಸಾಲಿನ ಕಾನೂನು ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಎಚ್.ಆರ್.ಅಂಜಲಿ ಅವರನ್ನು ಸನ್ಮಾನಿಸಲಾಯಿತು. ಅಂತರ ಕಾಲೇಜು ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಬಿಳೆಗಲ್ಲೂರು, ಕಾನೂನು ಕಾಲೇಜಿನ ಪ್ರಾಚಾರ್ಯ ವಿ.ಎಸ್.ವಿನಯ್, ಉಪನ್ಯಾಸಕರಾದ ಜಿ.ಎಸ್.ಚಿದಾನಂದ್, ಎ.ಎಸ್.ಜ್ಯೋತಿ, ರೇವತಿ ಹೆಗಡೆ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸತೀಶ್ ನಾಯಕ್, ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಡಿ.ಬಿ.ಪ್ರಸನ್ನಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net