ಕಾನೂನಿನ ಜ್ಞಾನ ಎಲ್ಲರಿಗೂ ಅವಶ್ಯಕ: ಶುಭ

kaanunu karyagara
Published on

ಮಡಿಕೇರಿ: ಕಾನೂನು ಸೇವಾ ಪ್ರಾಧಿಕಾರ ಎಂದರೆ ಪ್ರತಿಯೊಬ್ಬರಿಗೂ ಎಲ್ಲಾ ರೀತಿಯ ಉಚಿತ ಕಾನೂನು ನೆರವು ಮತ್ತು ಅರಿವನ್ನು ನೀಡುವುದು. ಲೋಕ ಅದಾಲತ್ ಮೂಲಕ ರಾಜಿ ಸಂಧಾನ ಏರ್ಪಡಿಸಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವುದು ಉದ್ದೇಶವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾನೂನಿನ ಅಜ್ಞಾನಕ್ಕೆ ಕ್ಷಮೆ ಇಲ್ಲ. ಆದ್ದರಿಂದ ಕಾನೂನಿನ ಜ್ಞಾನ ಎಲ್ಲರಿಗೂ ಅವಶ್ಯಕ. ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು. ಶಿಕ್ಷಣದೊಂದಿಗೆ ಮಾನವೀಯ ಮೌಲ್ಯ ಮುಖ್ಯ ಎಂದು ಪ್ರತಿಪಾಧಿಸಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಕೆ.ಸರಸ್ವತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವುಗಳು ಶಿಸ್ತುಬದ್ಧ ಜೀವನ ನಡೆಸಿ, ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕಬೇಕು. ಪ್ರಾಣಿ ಪ್ರಪಂಚ, ಮಾನವ ಪ್ರಪಂಚದಲ್ಲಿ ನಾವುಗಲೇ ಶ್ರೇಷ್ಠ. ಆದ್ದರಿಂದ ನಾವೆಲ್ಲರೂ ಕಾನೂನಾತ್ಮಕವಾಗಿ ಜೀವಿಸಬೇಕು ಎಂದರು.

ಭೂವಿಕ ಮತ್ತು ತಂಡ ಪ್ರಾರ್ಥಿಸಿದರೆ, ಪ್ರಿಯಾ ಸ್ವಾಗತಿಸಿ, ನಿರ್ಮಲ ನಿರೂಪಿಸಿ, ವಂದಿಸಿದರು. ಉಪನ್ಯಾಸಕರಾದ ಸತೀಶ್, ನಮಿತ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಬಿ.ಎಸ್.ಜಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net