

ಕಕಮರಿ: ಗಳಿಸಿದ ಆಸ್ತಿ, ಅಂತಸ್ತು ಕೊನೆವರೆಗೆ ಉಳಿಯುವುದಿಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆವರೆಗೂ ಜತೆಗಿರುತ್ತದೆ ಎಂದು ಬೆಂಗಳೂರ ಅಸಿಸ್ಟಂಟ್ ಕಮಿಷನರ್ ಮಲಗೌಡ ಝರೆ ಹೇಳಿದರು.
ಅವರು ಸಮೀಪದ ಬನ್ನೂರ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸ್ನೇಹ ಸಮ್ಮೇಳನ ಮತ್ತು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಕಲಬುರಗಿ ಕ.ಕ.ರ.ಸಾ.ಸಂಸ್ಥೆ ಮುಖ್ಯ ಯೋಜನಾ ಮತ್ತು ಸಂಖ್ಯಾಧಿಕಾರಿ ಮಹಾದೇವ ಮುಂಜಿ ಮಾತನಾಡಿ, ಸಾಧಿಸುವವನಿಗೆ ಹಠ ಇರಬೇಕು. ಸಾಧಿಸುವ ಛಲ ಇರಬೇಕು ಎಂದರು. ಪ.ಪೂ.ಮುರಗೇಶ ಹಿರೇಮಠ ದಿವ್ಯಸಾನ್ನಿಧ್ಯ ವಹಿಸಿದ್ದರು. ಪ್ರೌಢಶಾಲೆಯ ಮುಖ್ಯ ಶಿಕ್ಷ-ಕ ಉಮೇಶ ಹಿರೇಮನಿ, ಬಿಇಒ ಎಂ.ಆರ್.ಮುಂಜಿ, ಎಸ್ಡಿಎಂಸಿ ಅಧ್ಯಕ್ಷ ಸಿಕಂದರ ಮುಜಾವರ, ಅಥಣಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ಎನ್.ಎಂ.ಕೇರಿ, ನಾನಾಗೌಡ ಪಾಟೀಲ, ಕನ್ನಾಳ ಗ್ರಾಪಂ ಅಧ್ಯಕ್ಷ ಅನಿಲಕುಮಾರ ರೂಗಿ, ಪಿಡಿಒ ವೈಶಾಲಿ ಅನಂತಪೂರ, ಬಸಪ್ಪ ಕುಂಟೋಜಿ, ಪಿಕೆಪಿಎಸ್ ಅಧ್ಯಕ್ಷ ಗುರುರಾಜ ಕಾಮನ, ಚನ್ನಪ್ಪ ಶೇಗಾಂವಿ, ಸಿದ್ದಪ್ಪ ನಿಡೋಣಿ, ಮಲ್ಲಪ್ಪ ಹರಗಿ, ಮಮತಾಜ ಮುಲ್ಲಾ, ಸುಭಾಷ ಪೂಜಾರಿ ಇತರರಿದ್ದರು. ಬಿ.ವಿ.ನಾಂದ್ರೆ ಪ್ರಾಸ್ತಾವಿಕ ಮಾತನಾಡಿದರು. ಡಿ.ಎಸ್.ರಾಠೋಡ ಸ್ವಾಗತಿಸಿದರು. ಶಿವಶರಣ ಬಿರಾದಾರ ನಿರೂಪಿಸಿದರು.