ವಿದ್ಯಾರ್ಥಿ ಜೀವನಕ್ಕೆ ಜ್ಞಾನವೇ ಯಶಸ್ವಿ ಆಯುಧ

Knowledge is the successful weapon for student life.
Published on

ಸಿಂದಗಿ:ವಿದ್ಯಾರ್ಥಿಗಳು, ಪುರಾಣ ಕಥೆಗಳ ಮೂಲಕ ಜ್ಞಾನ ಮತ್ತು ಮೌಲ್ಯಾಧಾರಿತ ಗುಣ ಬೆಳೆಸಿಕೊಳ್ಳಬೇಕೆಂದು ಬೆಂಗಳೂರಿನ ಶಿಣ ತ ಡಾ. ಗಣೇಶ ಭಟ್​ ಹೇಳಿದರು.ನಗರದ ಹೊರವಲಯದಲ್ಲಿನ ಭೀಮಾ ಯೂನಿವರ್ಸಲ್​ ಸೆಂಟ್ರಲ್​ ಸ್ಕೂಲ್​ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಹಾಗೂ ಶಿಕರ ಮಾರ್ಗದರ್ಶನ ಮತ್ತು ಕೌಶಲಾಭಿವೃದ್ಧಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಎಲ್ಲರೂ ಸುಶಿತರಾಗಿ ಪರಿಸರ ಪ್ರಜ್ಞೆಯೊಂದಿಗೆ ರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಅರಿತು, ಪ್ರಕೃತಿಯ ಭಾಗವಾಗಿ ಸುಂದರ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ಜೀವಶಾಸ್ತ್ರ ತ ಪ್ರಕಾಶ ಎಂ.ಬಿ. ಹಾಗೂ ಇಂಗ್ಲಿಷ್​ ಭಾಷಾ ಪ್ರಾಧ್ಯಾಪಕಿ ಕವಿತಾ ಎಸ್​. ಮಾತನಾಡಿ, ಜ್ಞಾನವೂ ಪ್ರತಿ ವಿದ್ಯಾರ್ಥಿ ಜೀವನದ ಆಯುಧವಾಗಿದೆ. ಅದನ್ನು ಸಮರ್ಥ, ಪ್ರಜ್ಞಾಪೂರ್ವವಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಸಾಮರ್ಥ್ಯ ತೋರಬೇಕು. ಸುಂದರ ಸಮಾಜದಲ್ಲಿ ನಮ್ಮ ಬದುಕು ಹಸನಾಗಬೇಕಾದರೆ, ಶಿಣ ತುಂಬ ಅವಶ್ಯಕ. ಭಾಷಾ ಕೌಶಲ ಬೆಳೆಯಲು ಕ್ರಮಬದ್ಧತೆ, ವಾಕ್ಯ ರಚನೆ, ಸರಳ ಮತ್ತು ಸ್ಪಷ್ಟತೆಗೆ ವ್ಯಾಕರಣ ಕಲಿಕೆ ತುಂಬ ಅವಶ್ಯಕವಾಗಿದೆ ಎಂದರು.

ಸಂಸ್ಥೆ ಅಧ್ಯ ವಿಠ್ಠಲ ಕೊಳ್ಳೂರ ಅಧ್ಯತೆ ವಹಿಸಿ, ಮಕ್ಕಳು ಶಿಣವಂತರಾಗಲು, ಸಮರ್ಥ ಸಂಸ್ಥೆ, ಕಲಿಕಾ ಕೌಶಲಭರಿತ ಶಿಕ ಹಾಗೂ ಸ್ಪರ್ಧಾತ್ಮಕ ಓದಿನ ಅಭಿರುಚಿ ರೂಢಿಸಿಕೊಂಡರೆ ವಿದ್ಯಾರ್ಥಿ ಜೀವನ ಯಶಸ್ವಿಯಾಗುತ್ತದೆ ಎಂದರು.

ಕಾರ್ಯಾಗಾರದಲ್ಲಿ ಪ್ರಾಂಶುಪಾಲೆ ಶಾಹಿನ್​ ಶೇಖ್​, ಶಿಕರು ವೃಂದದವರು, ವಿದ್ಯಾರ್ಥಿಗಳು ಇದ್ದರು.

ಸಿಂದಗಿ ನಗರದ ಭೀಮಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾರ್ಗದರ್ಶನ ಮತ್ತು ಕೌಶಲಾಭಿವೃದ್ಧಿ ಕಾರ್ಯಾಗಾರದಲ್ಲಿ ಶಿಣ ತ ಡಾ. ಗಣೇಶ ಭಟ್​ ಮಾತನಾಡಿದರು. ವಿಠ್ಠಲ ಕೊಳ್ಳೂರ, ಪ್ರಕಾಶ ಎಂ.ಬಿ., ಕವಿತಾ ಎಸ್​. ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net