

ಬನ್ನೂರು: ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಸಮೀಪದ ಚಾಮನಹಳ್ಳಿಯ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ 18ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿದ್ದು, ಉತ್ತಮ ರೀತಿಯಲ್ಲಿ ವಿದ್ಯೆ ಕಲಿಯುವ ಮೂಲಕ ಒಳ್ಳೆಯ ನಾಗರಿಕ ಜೀವನವನ್ನು ಸಾಗಿಸಬೇಕು ಎಂದು ತಿಳಿಸಿದರು.
ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿದರು. ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ, ಪುರಸಭಾ ಸದಸ್ಯರಾದ ಸುರೇಶ್, ವಿಜಯ್‌ಕುಮಾರ್, ಪ್ರಾಂಶುಪಾಲ ಅಶ್ವಥ್, ಮುಖ್ಯಶಿಕ್ಷಕ ಉಮಾಶಂಕರ್, ವೈ.ಎಸ್.ರಾಮಸ್ವಾಮಿ, ವ್ಯವಸ್ಥಾಪಕ ಆನಂದ್ ಹಲವರು ಉಪಸ್ಥಿತರಿದ್ದರು.