ವಿದ್ಯೆ ಕದಿಯಲಾರದ ವಸ್ತು

hhp 11-1
ಹೂವಿನಹಿಪ್ಪರಗಿ ಪಟ್ಟಣದ ಕಾಯಕ ಇಂಟರ್‌ನ್ಯಾಷನಲ್ ಸ್ಕೂಲ್ ವಾರ್ಷಿಕೋತ್ಸವ ನಿಮಿತ್ತ ಶಾಲಾ ಆವರಣದಲ್ಲಿ ಪಾಲಕರ ಪಾದಪೂಜೆ ಕಾರ್ಯಕ್ರಮದಲ್ಲಿ ಮಕ್ಕಳು ಪೋಷಕರ ಆಶೀರ್ವಾದ ಪಡೆದರು.
Published on

ಹೂವಿನಹಿಪ್ಪರಗಿ: ಓದು ಬರಹ ಕಲಿಸುವ ಜತೆಗೆ ಸುಸಂಸ್ಕೃತ ಪ್ರಜೆಗಳನ್ನು ಸಿದ್ಧಗೊಳಿಸುವುದು ನಮ್ಮ ಕರ್ತವ್ಯ ಎಂದು ಭವಿಸಿ ನವು ಶಿಕ್ಷಣ ಸಂಸ್ಥೆ ಅರಂಭಿಸಿದ್ದೇವೆ ಎಂದು ಕಾಯಕ ಇಂಟರ್‌ನ್ಯಾಷನಲ್ ಸ್ಕೂಲ್ ಅಧ್ಯಕ್ಷ ವಿ. ಎಸ್. ಭರತ ಹೇಳಿದರು.

ಹೂವಿನಹಿಪ್ಪರಗಿ ಇಂಟರ್ ನ್ಯಾಷನಲ್ ಸ್ಕೂಲ್ ವಾರ್ಷಿಕೋತ್ಸವ ನಿಮಿತ್ತ ಶಾಲಾ ಆವರಣದಲ್ಲಿ ಶುಕ್ರವಾರ ಹಮ್ಮಿಕೂಂಡಿರುವ ಪಾಲಕರ ಪಾದಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾರು ಕದಿಯಲಾರದ ವಸ್ತು ಎಂದರೆ ವಿದ್ಯೆ. ಅದನ್ನು ನಮ್ಮ ಸಂಸ್ಥೆ ಪ್ರಾಮಾಣಿಕ ಹಾಗೂ ಬದ್ಧತೆಯಿಂದ ನೀಡುತ್ತಿದೆ. ಇದು ನನಗೆ ತುಂಬಾ ಸಂತಸ ಸಂಗತಿಯಾಗಿದೆ ಎಂದರು.

ವಿದ್ಯಾರ್ಥಿಗಳು ಸಂಪ್ರದಾಯ ಬದ್ಧವಾಗಿ ತಂದೆ- ತಾಯಿಯವ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ಶಿವಣ್ಣ ಗುಂಡಾನವರ, ಶಾಂತು ಹಾದಿಮನಿ, ಗುರುಸ್ವಾಮಿ ಹಿರೇಮಠ, ಸಿದ್ದು ಹಾದಿಮನಿ, ಕುಮಾರ ನಂದವಾಡಗಿ, ಸಂತೋಷ ತೋಟದ, ಶ್ರೀಶೈಲ ಕನಮಡಿ, ರಮೇಶ ಬಡಗೇರ, ಸಂಸ್ಥೆ ಕಾರ್ಯದರ್ಶಿ ಶ್ರುತಿ ವಿ. ಎಸ್. ಸೇರಿ ಶಾಲಾ ಶಿಕ್ಷಕರು, ಮಕ್ಕಳು ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net