

ಹುಬ್ಬಳ್ಳಿ: ಪತ್ರಿಕಾ ವಿತರಕರ ದಿನಾಚರಣೆ ನಿಮಿತ್ತ ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದಿಂದ ನಗರದ ಮೂರುಸಾವಿರ ಮಠದ ಸಭಾಭವನದಲ್ಲಿ ಬುಧವಾರ ಪತ್ರಿಕಾ ವಿತರಕರಾದ ರಾಜೇಶ ಶಿವಾಜಿ ಜಾಧವ ಹಾಗೂ ರಾಜು ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, ಪತ್ರಿಕೆಗಳನ್ನು ಓದುವುದರಿಂದ ಜ್ಞಾನದ ಸಂಪತ್ತು ಇಮ್ಮಡಿಯಾಗುತ್ತದೆ. ಓದು ಮನುಷ್ಯನನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ ಎಂದರು.
ಉಪಾಧ್ಯಕ್ಷ ಶಾಂತರಾಜ ಪೋಳ, ಸಾಧನಾ ಪೂಜಾರ ಮಾತನಾಡಿದರು.
ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಪ್ರಮುಖರಾದ ಶ್ರೀನಿವಾಸ ಏಕಬೋಟೆ, ಸಂತೋಷ ಶೆಟ್ಟಿ, ಸಂತೋಷ ವೆರ್ಣೇಕರ, ಅನಿಲ ಬೇವಿನಕಟ್ಟಿ, ಸಂತೋಷ ಕಾಟವೆ, ಸಚಿನ್ ಕಂಗಳೆಕರ, ಸಂತೋಷ ಕಟ್ಟಿ, ಶಿವಾನಂದ ಕೊಡ್ಲಿ, ಅನಿತಾ ಜಡಿ, ಗಾಯತ್ರಿ ನೆಲ್ಲಿಕೊಪ್ಪ, ಸರಸ್ವತಿ ಮೆಹರವಾಡೆ, ರೂಪಾ ಅಂಗಡಿ, ಅಕ್ಕಮ್ಮ ಕಂಬಳಿ, ಸವಿತಾ ಕಂಗಳೆಕರ, ಸುಷ್ಮಾ ಕೋಟಗಿ, ಸೋಮಶೇಖರ ಶೆಟ್ಟರ್, ಪಾರ್ವತಿ ಹಿರೇಮಠ, ಅಕ್ಕಮಹಾದೇವಿ ಅಂದೇಲಿಮಠ, ಅಮರೇಶ ಹಿಪ್ಪರಗಿ, ಮಹೇಶ ಶೇಟ್, ಎಸ್.ಎಸ್. ಕಮಡೊಳ್ಳಿ ಶೆಟ್ಟರ್ ಇದ್ದರು.