ಸಮರ್ಪಣಾ ಭಾವದಿಂದ ಜ್ಞಾನ ವಿಸ್ತರಣೆ

5-ANP-P1 IRUVAKKI
ಶಿಕ್ಷಕರ ದಿನಾಚರಣೆ ನಿಮಿತ್ತ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಕುಲಪತಿ ಡಾ. ಆರ್.ಸಿ.ಜಗದೀಶ್ ಉದ್ಘಾಟಿಸಿದರು. ಡಾ. ಶಿವಶಂಕರ್, ಡಾ. ಕೆ.ಸಿ.ಶಶಿಧರ, ಡಾ. ದುಷ್ಯಂತಕುಮಾರ್ ಇತರರಿದ್ದರು.
Published on

ಆನಂದಪುರ: ಶಿಕ್ಷಕರು ಸದಾ ವ್ಯಾಸಂಗ ನಿರತರಾಗಿದ್ದು, ಜ್ಞಾನ ಗಳಿಸುತ್ತ ಸಾಗುತ್ತಾರೆ. ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸುವ ಗುರುವೃಂದ ಜ್ಞಾನ ವಿಸ್ತರಣಾ ಕಾರ್ಯ ಮಾಡುತ್ತದೆ ಎಂದು ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ತಿಳಿಸಿದರು.

ಮಂಗಳವಾರ ವಿವಿ ಆವರಣದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಅವರು, ಸ್ವ-ಅನುಭವ ಮತ್ತು ಸಂಶೋಧನೆಗಳ ಲವೇ ಜ್ಞಾನದ ರಾಶಿ. ಇವನ್ನು ತಮ್ಮ ವಿದ್ಯಾರ್ಥಿ ಸಮೂಹಕ್ಕೆ ಧಾರೆ ಎರೆದು ಪೋಷಿಸುವ ಶಿಕ್ಷಕರು ವಿದ್ಯಾರ್ಥಿಗಳ ಏಳಿಗೆಯಲ್ಲಿ ಸಂತಸ ಕಾಣುತ್ತಾರೆ ಎಂದರು.
ಶಿವಮೊಗ್ಗ ಮಿಡ್ ಟೌನ್ ರೋಟರಿ ಚಾರಿಟಬಲ್ ಫೌಂಡೇಷನ್ ಹಾಗೂ ವಿವಿಯ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ವಿವಿಯ 12 ಉಪನ್ಯಾಸಕರು ಮತ್ತು 60 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ. ಶಿವಶಂಕರ್, ಕುಲಸಚಿವ ಡಾ. ಕೆ.ಸಿ.ಶಶಿಧರ, ಸಂಶೋಧನಾ ನಿರ್ದೇಶಕ ಡಾ. ದುಷ್ಯಂತಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net